ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಥಮ ದರ್ಜೆ ಕ್ರಿಕೆಟ್ | ಔಟಾಗುವ ಮುನ್ನ 605ರನ್ ಗಳಿಸಿ ದಾಖಲೆ ಬರೆದ ಸರ್ಫರಾಜ್

Last Updated 5 ಫೆಬ್ರುವರಿ 2020, 7:22 IST
ಅಕ್ಷರ ಗಾತ್ರ

ರಾಜ್‌ಕೋಟ್‌: ರಣಜಿ ಕ್ರಿಕೆಟ್‌ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿರುವ ಮುಂಬೈ ಬ್ಯಾಟ್ಸ್‌ಮನ್‌ ಸರ್ಫರಾಜ್‌ ಖಾನ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನಿರಂತರ (ವಿಕೆಟ್‌ ಒಪ್ಪಿಸುವ ಮುನ್ನ) 605 ರನ್‌ ಗಳಿಸಿ ದಾಖಲೆ ಬರೆದಿದ್ದಾರೆ.

ಇಲ್ಲಿಸೌರಾಷ್ಟ್ರ ತಂಡದ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 78 ರನ್‌ ಗಳಿಸಿ ಔಟಾದ ಸರ್ಫರಾಜ್‌, ಹಿಂದಿನ ಎರಡು ಪಂದ್ಯಗಳಲ್ಲಿ ಔಟಾಗದೆ ಕ್ರಮವಾಗಿ 301ಮತ್ತು 226ಸಿಡಿಸಿದ್ದರು.

ಉತ್ತರ ಪ್ರದೇಶ ವಿರುದ್ಧ ತ್ರಿಶತಕ ಹಾಗೂಹಿಮಾಚಲ ಪ್ರದೇಶ ಎದುರು ದ್ವಿಶತಕ ಗಳಿಸಿದ್ದರು.

ವಿಕೆಟ್‌ ಒಪ್ಪಿಸುವ ಮುನ್ನ ಹೆಚ್ಚು ರನ್ ಗಳಿಸಿದ ದಾಖಲೆ ಇರುವುದು ಕೆ.ಸಿ ಇಬ್ರಾಹಿಂ ಹೆಸರಲ್ಲಿ. ಅವರು 1947–48ರ ಅವಧಿಯಲ್ಲಿ 709ರನ್‌ ಗಳಿಸಿದ್ದರು.

ಸದ್ಯ ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 262 ರನ್ ಗಳಿಸಿ ಆಲೌಟ್‌ ಆಗಿದೆ. ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿರುವ ಸೌರಾಷ್ಟ್ರ ಊಟದ ವಿರಾಮಕ್ಕೂ ಮುನ್ನ 28ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 77ರನ್‌ ಗಳಿಸಿದೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಔಟಾಗುವ ಮುನ್ನ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳು

ಆಟಗಾರ ದೇಶ ರನ್ ಅವಧಿ
ಕೆ.ಸಿ.ಇಬ್ರಾಹಿಂ ಭಾರತ 709 1947/48
ಗ್ರೇಮ್‌ ಹಿಕ್‌ ಇಂಗ್ಲೆಂಡ್‌ 645 1990
ವಿಜಯ್‌ ಮರ್ಚಂಟ್‌ ಭಾರತ 634 1947/42
ಪ್ಯಾಟ್ಸಿ ಹೆಂಡ್ರೆನ್‌ ಇಂಗ್ಲೆಂಡ್‌ 630 1929/30
ಎಸ್‌. ಬದ್ರಿನಾಥ್‌ ಭಾರತ 625 1907/08
ಪಿ. ಧರ್ಮಾನಿ ಭಾರತ 608 1999/00
ಸರ್ಫರಾಜ್‌ ಖಾನ್‌ ಭಾರತ 605 2019/20
ಎವರ್ಟನ್‌ ವೀಕ್ಸ್‌ ವೆಸ್ಟ್‌ ಇಂಡೀಸ್‌ 575 1950
ಫ್ರೆಡ್ಡಿ ಜೇಕ್‌ಮನ್‌ ಇಂಗ್ಲೆಂಡ್‌ 558 1951
ಬಾಬ್‌ ಸಿಂಪ್ಸನ್‌ ಆಸ್ಟ್ರೇಲಿಯಾ 545 1959/60
ವಿವಿಎಸ್‌ ಲಕ್ಷ್ಮಣ್‌ ಭಾರತ 538 1997/98
ವಿವಿಎಸ್‌ ಲಕ್ಷ್ಮಣ್‌ ಭಾರತ 530 1999/00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT