ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20| ಜಿಂಬಾಬ್ವೆ ವಿರುದ್ಧ ಪಾಕ್‌ ಸೋತರೆ ಮಿಸ್ಟರ್ ಬೀನ್‌ ಟ್ರೆಂಡ್ ಆಗಿದ್ದು ಯಾಕೆ?

Last Updated 28 ಅಕ್ಟೋಬರ್ 2022, 2:47 IST
ಅಕ್ಷರ ಗಾತ್ರ

ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ 'ಸೂಪರ್‌ 12' ಹಂತದ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಬಲಿಷ್ಠ ಪಾಕಿಸ್ತಾನ ಎದುರು ಒಂದು ರನ್‌ ಅಂತರದ ರೋಚಕ ಜಯ ದಾಖಲಿಸಿದೆ.

ಪಂದ್ಯ ಗೆದ್ದ ಕೂಡಲೇ ಟ್ವೀಟ್‌ ಮಾಡಿದ ಜಿಂಬಾಬ್ವೆ ಅಧ್ಯಕ್ಷ ಎಮರ್ಸನ್ ದಂಬುಡ್ಜೊ ಮ್ನಂಗಾಗ್ವಾ, ‘ಇದೆಂತಹ ಗೆಲುವು... ತಂಡದ ಆಟಗಾರರಿಗೆ ಅಭಿನಂದನೆಗಳು’ ಎಂದು ಹೇಳಿದ್ದಾರೆ.

‘ಮುಂದಿನ ಬಾರಿ, ನಿಜವಾದ ಮಿಸ್ಟರ್ ಬೀನ್ ಅವರನ್ನು ಕಳುಹಿಸಿ’ ಎಂದು ಎಮರ್ಸನ್‌ ಬರೆದಿದ್ದಾರೆ.

ಜಿಂಬಾಬ್ವೆ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಆರಂಭವಾಗುವುದಕ್ಕೂ ಮೊದಲು ಮತ್ತು ನಂತರ ಸಾಮಾಜಿಕ ಮಾಧ್ಯಮಗಳಲ್ಲಿ 'ಫ್ರಾಡ್ ಪಾಕ್ ಮಿಸ್ಟರ್ ಬೀನ್' ಎಂಬ ವಿಷಯ ಟ್ರೆಂಡ್ ಆಗಿತ್ತು. ಅದೇ ಹಿನ್ನೆಲೆಯಲ್ಲಿ ಅಧ್ಯಕ್ಷ ಎಮರ್ಸನ್‌ ‘ಮುಂದಿನ ಬಾರಿ ನಿಜವಾದ ಮಿಸ್ಟರ್‌ ಬೀನ್‌ ಅವರನ್ನು ಕಳುಹಿಸಿ’ ಎಂದು ಪಾಕಿಸ್ತಾನವನ್ನು ಮೂದಲಿಸಿದ್ದಾರೆ.

ಮಿಸ್ಟರ್‌ ಬೀನ್‌ ವಿಚಾರ ಬಂದಿದ್ದು ಎಲ್ಲಿಂದ?

ಪಂದ್ಯ ಆರಂಭವಾಗುವುದಕ್ಕೆ ಎರಡು ದಿನಗಳಿಗೂ ಮೊದಲೇ ನುಗು ಚಸುರು ಎಂಬ ಹೆಸರಿನ ಕ್ರಿಕೆಟ್‌ ಅಭಿಮಾನಿಯೊಬ್ಬ ಮಿಸ್ಟರ್‌ ಬೀನ್‌ ವಿಚಾರವನ್ನು ಪ್ರಸ್ತಾಪಿಸಿ, ಪಾಕಿಸ್ತಾನಕ್ಕೆ ಸೋಲಿನ ಎಚ್ಚರಿಕೆ ನೀಡಿದ್ದ.

‘ಜಿಂಬಾಬ್ವೆಯವರಾದ ನಾವು ನಿಮ್ಮನ್ನು ಕ್ಷಮಿಸುವುದಿಲ್ಲ... ನೀವು ಒಮ್ಮೆ ಮಿಸ್ಟರ್ ಬೀನ್ ರೋವನ್ ಬದಲಿಗೆ ಆ ಫ್ರಾಡ್ ಪಾಕ್ ಬೀನ್ ಅನ್ನು ನಮ್ಮ ದೇಶಕ್ಕೆ ಕಳುಹಿಸಿದ್ದಿರಿ. ಅವತ್ತಿನ ಲೆಕ್ಕವನ್ನು ನಾಳೆ ಚುಕ್ತಾ ಮಾಡುತ್ತೇವೆ. ಮಳೆ ನಿಮ್ಮನ್ನು (ಸೋಲಿನಿಂದ) ಪಾರುಮಾಡಲಿ ಎಂದು ಪ್ರಾರ್ಥಿಸುತ್ತೇವೆ’ ಎಂದು ಬರೆದುಕೊಂಡಿದ್ದ. ಈ ಟ್ವೀಟ್‌ಗೆ ಭಾರಿ ಸ್ಪಂದನೆ ದೊರೆತಿದೆ. ಇದೇ ಟ್ವೀಟ್‌ ಅನ್ನು ಹಲವರು ಕಾಪಿ ಮಾಡಿ ಪ್ರತ್ಯೇಕವಾಗಿ ಪೋಸ್ಟ್‌ ಮಾಡಿದ್ದರು. ಅಂತಿಮವಾಗಿ ಪಂದ್ಯ ಸೋತಾಗ ‘ಫ್ರಾಡ್‌ ಪಾಕ್‌ ಮಿಸ್ಟರ್‌ ಬೀನ್‌’ ಟ್ರೆಂಡ್‌ ಆಗಿತ್ತು.

ಯಾರೀತ ಪಾಕ್‌ ಫ್ರಾಡ್‌ ಬೀನ್‌?

ಈ ವಿಷಯ ಜಿಂಬಾಬ್ವೆಯಲ್ಲಿ 2016ರಲ್ಲಿ ನಡೆದಿದ್ದ ಘಟನೆಯೊಂದಕ್ಕೆ ಸಂಬಂಧಿಸಿದ್ದಾಗಿದೆ. ಪಾಕಿಸ್ತಾನಿ ಹಾಸ್ಯನಟ ಆಸಿಫ್ ಮೊಹಮ್ಮದ್ ಎಂಬುವವರು ಹರಾರೆಯ ‘ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್‌’ನಲ್ಲಿ ಮಿಸ್ಟರ್‌ ಬೀನ್‌ ಹೆಸರಲ್ಲಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟಿದ್ದರು ಎನ್ನಲಾಗಿದೆ. ಆದರೆ, ಕಾರ್ಯಕ್ರಮ ನೀರಸವಾಗಿ ಅಂತ್ಯಗೊಂಡಿತ್ತು. ಜಿಂಬಾಬ್ವೆ ಜನ ಅದನ್ನು ವಂಚನೆ ಎಂದು ಕರೆದಿದ್ದರು. ನಮ್ಮ ಹಣ ವ್ಯರ್ಥವಾಗಿದೆ ಎಂದು ಆರೋಪಿಸಿದ್ದರು ಎಂದು ವರದಿಗಳು ಹೇಳಿವೆ.

ಈ ಘಟನೆಗೆ ಸೇಡು ತೀರಿಸಿಕೊಂಡಿರುವುದಾಗಿ ಜಿಂಬಾಬ್ವೆ ಕ್ರಿಕೆಟ್‌ ಆಭಿಮಾನಿಗಳು ಈಗ ಟ್ವಿಟರ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ. ದೇಶದ ಅಧ್ಯಕ್ಷರೂ ಇದಕ್ಕೆ ಧ್ವನಿಗೂಡಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT