ರಾವಲ್ಪಿಂಡಿ : ಆರಂಭ ಆಟಗಾರ ಶಾದ್ಮನ್ ಇಸ್ಲಾಂ ಅವರು ಕೇವಲ ಏಳು ರನ್‌ಗಳಿಂದ ಶತಕ ತಪ್ಪಿಸಿಕೊಂಡರೂ, ಬಾಂಗ್ಲಾದೇಶ ತಂಡ, ಮೊದಲ ಟೆಸ್ಟ್‌ನ ಮೂರನೆ ದಿನವಾದ ಶುಕ್ರವಾರ ಪಾಕಿಸ್ತಾನದ ಎದುರು ದಿಟ್ಟ ಹೋರಾಟ ಪ್ರದರ್ಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪಾಕಿಸ್ತಾನ 6 ವಿಕೆಟ್‌ಗೆ 448 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಗುರುವಾರ ವಿಕೆಟ್ ನಷ್ಟವಿಲ್ಲದೇ 22 ರನ್ ಗಳಿಸಿದ್ದ ಪ್ರವಾಸಿ ತಂಡದ ಪರ ಶಾದ್ಮನ್ 93 ರನ್ ಗಳಿಸಿದರು. ಮೊಮಿನುಲ್ ಹಕ್ (50), ಮುಷ್ಫಿಕುರ್ ರಹೀಂ (ಅಜೇಯ 55) ಮತ್ತು ಲಿಟ್ಟನ್ ದಾಸ್ (ಔಟಾಗದೇ 52) ಅವರೂ ಅರ್ಧಶತಕಗಳನ್ನು ಬಾರಿಸಿದರು. ಮುರಿಯದ ಆರನೇ ವಿಕೆಟ್‌ಗೆ ರಹೀಂ ಮತ್ತು ದಾಸ್ 98 ರನ್ ಸೇರಿಸಿದ್ದಾರೆ.