ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಕ್‌ಬಾಲ್ ಟೆಸ್ಟ್‌ನಲ್ಲಿ ಶಫಾಲಿ ವರ್ಮಾ ಪಾತ್ರ ಮಹತ್ವದ್ದು: ಮಾಜಿ ಆಟಗಾರ್ತಿ ಕಲಾ

Last Updated 17 ಸೆಪ್ಟೆಂಬರ್ 2021, 16:32 IST
ಅಕ್ಷರ ಗಾತ್ರ

ಮುಂಬೈ: ಆಸ್ಟ್ರೇಲಿಯಾ ಮಹಿಳಾ ತಂಡದ ಎದುರು ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಶಫಾಲಿ ವರ್ಮಾ ಅವರ ಆಟವು ಮಹತ್ವದ್ದಾಗಲಿದೆ. ಅವರಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸುವ ಸಾಮರ್ಥ್ಯವಿದೆ ಎಂದು ಮಾಜಿ ಆಲ್‌ರೌಂಡರ್ ಹೇಮಲತಾ ಕಲಾ ಅಭಿಪ್ರಾಯಪಟ್ಟಿದ್ದಾರೆ.

‘ಶಫಾಲಿ ಕೆಂಪು ಚೆಂಡಿನ ಎದುರು ಚೆನ್ನಾಗಿ ಆಡಿದ್ದಾರೆ. ಪವರ್ ಹಿಟ್ ಕೌಶಲ ಅಮೋಘವಾಗಿದೆ. ಹಗಲು–ರಾತ್ರಿ ಟೆಸ್ಟ್‌ನಲ್ಲಿಯೂ ಅವರು ಚೆನ್ನಾಗಿ ಆಡುವ ವಿಶ್ವಾಸವಿದೆ’ ಎಂದು ಸೋನಿ ಸಿಕ್ಸ್ ವಾಹಿನಿಯು ಆಯೋಜಿಸಿದ್ದ ವರ್ಚುವಲ್ ಸಂವಾದದಲ್ಲಿ ಅವರು ಹೇಳಿದರು.

ಭಾರತ ಮಹಿಳಾ ತಂಡದ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥೆ ಹೇಮಲತಾ, ‘ಶಫಾಲಿ ಅವರಲ್ಲದೇ ತಂಡದಲ್ಲಿ ಇನ್ನೂ ಕೆಲವು ಉತ್ತಮ ಬ್ಯಾಟರ್‌ಗಳಿದ್ದಾರೆ. ಪಿಂಕ್ ಬಾಲ್‌ ಟೆಸ್ಟ್ ಆಡುವುದರಿಂದ ಅವರ ಅನುಭವದ ಮಟ್ಟ ಮತ್ತು ಕೌಶಲಗಳು ಸುಧಾರಣೆಯಾಗಲಿವೆ’ ಎಂದರು.

‘ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿ ನಮಗೆ ಮಹತ್ವದ್ದಾಗಿದೆ. ಏಕೆಂದರೆ ನಾವು ಬಹಳ ವರ್ಷಗಳ ನಂತರ ಟೆಸ್ಟ್ ಮಾದರಿಗೆ ಮರಳಿದ್ದೇವೆ. ಅಲ್ಲದೇ ಆಸ್ಟ್ರೇಲಿಯಾ ಒಳ್ಳೆಯ ತಂಡವಾಗಿದ್ದು ಭಾರತ ತಂಡಕ್ಕೆ ಉತ್ತಮ ಅನುಭವ ಸಿಗುವುದಂತೂ ಖಚಿತ. ಬೌಲಿಂಗ್‌ನಲ್ಲಿ ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಕರ್ ಮತ್ತು ಶಿಖಾ ಪಾಂಡೆ ಅವರೊಂದಿಗೆ ಒಬ್ಬರು ಲೆಗ್‌ಸ್ಪಿನ್ನರ್ ಕಣಕ್ಕಿಳಿದರೆ ಸೂಕ್ತವಾಗಬಹುದು’ ಎಂದು ಹೇಮಲತಾ ಹೇಳಿದರು.

ಇದೇ 21ರಿಂದ ಮಹಿಳಾ ಟೆಸ್ಟ್ ಶುರುವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT