ಮಂಗಳವಾರ, ಮಾರ್ಚ್ 21, 2023
28 °C

ಕ್ರಿಕೆಟರ್ ಶಾಹೀನ್ ಅಫ್ರಿದಿ ಜತೆಗಿನ ಮಗಳ ಮದುವೆ ಫೋಟೊ ಹಂಚಿಕೊಂಡ ಶಾಹೀದ್ ಅಫ್ರಿದಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ಪುತ್ರಿ ಅನ್ಶಾ ಮತ್ತು ವೇಗದ ಬೌಲರ್‌ ಶಾಹೀನ್‌ ಷಾ ಅಫ್ರಿದಿ ಅವರ ವಿವಾಹದ ಚಿತ್ರವನ್ನು ಪಾಕಿಸ್ತಾನ ಕ್ರಿಕೆಟ್‌ನ ಮಾಜಿ ನಾಯಕ ಶಾಹೀದ್‌ ಅಫ್ರಿದಿ ಶನಿವಾರ ಬೆಳಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಶಾಹೀನ್‌ ಅಫ್ರಿದಿ ಮತ್ತು ಅನ್ಶಾ ಅವರ ವಿವಾಹ ಶುಕ್ರವಾರ ನಡೆದಿತ್ತು. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್, ಸರ್ಫರಾಜ್ ಅಹ್ಮದ್, ಫಖರ್ ಜಮಾನ್ ಮತ್ತು ಶದಬ್ ಖಾನ್ ಸೇರಿದಂತೆ ಪಾಕಿಸ್ತಾನದ ಹಲವು ಆಟಗಾರರು ಮದುವೆಯಲ್ಲಿ ಭಾಗವಹಿಸಿದ್ದರು.

ಕ್ರಿಕೆಟರ್‌ನೊಂದಿಗಿನ ಮಗಳ ವಿವಾಹದ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಶಾಹೀದ್‌ ಅಫ್ರಿದಿ ಅದಕ್ಕೊಂದು ಭಾವನಾತ್ಮಕ ಟಿಪ್ಪಣಿಯನ್ನೂ ಬರೆದಿದ್ದಾರೆ.

‘ಮಗಳೆಂದರೆ ಉದ್ಯಾನದ ಅತ್ಯಂತ ಸುಂದರವಾದ ಹೂವು. ಏಕೆಂದರೆ ಆ ಹೂ ಆಶೀರ್ವಾದಗಳೊಂದಿಗೆ ಅರಳಿರುತ್ತದೆ. ನಿಮ್ಮ ನಗು, ನೀವು ಕಾಣುವ ಕನಸು ಮತ್ತು ನಿಮ್ಮ ಹೃದಯದ ಪ್ರೀತಿಯೇ ಮಗಳು. ಅಪ್ಪನಾಗಿ, ನಾನು ನನ್ನ ಮಗಳನ್ನು ನಿಕ್ಕಾದಲ್ಲಿ ಶಾಹೀನ್‌ ಅಫ್ರಿದಿಗೆ ನೀಡಿದ್ದೇನೆ. ಅವರಿಬ್ಬರಿಗೆ ಅಭಿನಂದನೆಗಳು’ ಎಂದು ಅಫ್ರಿದಿ ಬರೆದುಕೊಂಡಿದ್ದಾರೆ.

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು