ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಪಾಕ್ ಕ್ರಿಕೆಟ್ | ಶೋಯೆಬ್ ಅಖ್ತರ್ ಮಾತಿನ ಅರ್ಥವೇನಿರಬಹುದು?

Last Updated 13 ಏಪ್ರಿಲ್ 2020, 11:54 IST
ಅಕ್ಷರ ಗಾತ್ರ
ADVERTISEMENT
""
""
""

ಜಾಗತಿಕ ಪಿಡುಗು ಕೋವಿಡ್‌–19 ಯಾವುದೇ ಒಂದು ದೇಶಕ್ಕೆ ಸೀಮಿತವಾಗಿಲ್ಲ. ಸೋಂಕಿಗೆ ಕಡಿವಾಣ ಹಾಕಲು ದೊಡ್ಡಮಟ್ಟದ ಸಂಪನ್ಮೂಲಗಳು ಬೇಕಿವೆ.ಪರಿಹಾರ ಕಾರ್ಯಕ್ರಮಗಳಿಗಾಗಿಹಣ ಸಂಗ್ರಹಿಸುವ ಉದ್ದೇಶದಿಂದಭಾರತ ಮತ್ತು ಪಾಕಿಸ್ತಾನ ತಂಡಗಳ ಕ್ರಿಕೆಟ್‌ ಪಂದ್ಯ ಸರಣಿ ಆಯೋಜಿಸುವ ಬಗ್ಗೆ ಪಾಕ್‌ ಮಾಜಿ ವೇಗದ ಬೌಲರ್‌ ಶೋಯಬ್‌ ಅಖ್ತರ್‌ ಕೆಲವು ದಿನಗಳ ಹಿಂದೆ ಪ್ರಸ್ತಾಪಿಸಿದ್ದರು. ಇದಕ್ಕೆ ಕಪಿಲ್‌ ದೇವ್‌ ಪ್ರತ್ಯುತ್ತರವನ್ನೂ ನೀಡಿದ್ದರು.

ಸೋಂಕು ಭೀತಿಯಿಂದಾಗಿ ಜಗತ್ತಿನಾದ್ಯಂತ ಕ್ರೀಡಾಚಟುವಟಿಕೆಗಳನ್ನು ಸ್ಥಗಿತಗೊಳಸಿರುವ ಈ ಹೊತ್ತಿನಲ್ಲಿ ಅಖ್ತರ್‌ ನೀಡಿದ್ದ ಸಲಹೆ ಸಮಯೋಚಿತ ಎಂದು ಹಲವರಿಗೆ ಅನ್ನಿಸಿರಲಿಲ್ಲ. ಅಖ್ತರ್‌ ನೀಡಿದ ಈ ಸಲಹೆಯ ಹಿಂದಿನ ಆಶಯಗಳ ಬಗ್ಗೆ ಆಲೋಚಿಸಿದಾಗಭಾರತ–ಪಾಕಿಸ್ತಾನ ಕ್ರಿಕೆಟ್‌ ತಂಡಗಳು ಕಾಲದ ಪರೀಕ್ಷೆಯಲ್ಲಿ ಹಾದು ಬಂದ ವಿಶಿಷ್ಟ ಸಂದರ್ಭಗಳು ನೆನಪಾಗುತ್ತವೆ.

ಎರಡೂ ದೇಶಗಳ ಕ್ರಿಕೆಟ್‌ ಸಂಬಂಧವನ್ನು ಮೈದಾನದಾಚೆಗಿನ ಭಾವನೆಗಳೇ ಹೆಚ್ಚು ಪ್ರಭಾವಿಸಿವೆ. ಹಲವು ಬಾರಿ ಕ್ರಿಕೆಟ್‌ ಸಂಬಂಧವನ್ನು ಎರಡೂ ದೇಶಗಳು ಕಡಿಕೊಳ್ಳಲು ಮೈದಾನದಾಚೆಗಿನ ಭಾವನೆಗಳೇ ಕಾರಣ. ಈ ಬಾರಿ ಶೋಯೆಬ್ ಅಖ್ತರ್ ಕ್ರಿಕೆಟ್ ಆಡಬೇಕು ಎಂದು ಕರೆನೀಡಲು ಸಹ ಮೈದಾನದಾಚೆಗಿನ ವಿಷಯವೇ ಕಾರಣವಾಗಿರುವುದು ಗಮನ ಸೆಳೆಯುತ್ತದೆ.

ಆಗ ವಿಭಜನೆಯ ದ್ವೇಷ; ಈಗ ಕೋವಿಡ್ ಭೀತಿ

ಭಯೋತ್ಪಾದನೆಗೆ ಕಡಿವಾಣ ಹಾಕದ ಪಾಕ್‌ ಸರ್ಕಾರದ ಧೋರಣೆ ಭಾರತಕ್ಕೆ ಪಥ್ಯವಿಲ್ಲ. ಭಯೋತ್ಪಾದನೆ ಮತ್ತು ಕಾಶ್ಮೀರದ ವಿಚಾರದಲ್ಲಿ ಪಾಕ್ ಸರ್ಕಾರ ತಳೆದಿರುವ ನಿಲುವಿನ ಕಾರಣದಿಂದಾಗಿ ಎರಡೂ ತಂಡಗಳು2013ರಿಂದೀಚೆಗೆ ದ್ವಿಪಕ್ಷೀಯ ಸರಣಿಯಲ್ಲಿ ಆಡುತ್ತಿಲ್ಲ. ಎರಡೂ ತಂಡಗಳ ನಡುವೆ 2008ರಲ್ಲಿ ಕೊನೆಯ ಸಲ ಟೆಸ್ಟ್‌ ಸರಣಿ ಆಡಿದ್ದವು.

ಉಭಯ ತಂಡಗಳು ಮೊದಲ ಸಲಮುಖಾಮುಖಿಯಾಗಿದ್ದು1952ರಲ್ಲಿ. ಆಗ ದೇಶ ವಿಭಜನೆಯ ದುರಂತದ ಭಾವನೆಗಳಿಂದ ಎರಡೂ ದೇಶಗಳ ಕೋಟ್ಯಂತರ ಮನಸ್ಸುಗಳು ಭಾರ ಇನ್ನೂ ಕಡಿಮೆಯಾಗಿರಲಿಲ್ಲ. ಅಂದು ಕ್ರಿಕೆಟ್‌ನಲ್ಲಿ ಏನಾಯಿತು ಎನ್ನುವುದಕ್ಕಿಂತ ಈಗ ಶೋಯೆಬ್ ಅಖ್ತರ್ ಕ್ರಿಕೆಟ್ ಆಡಬೇಕು ಎಂದು ಹೇಳಿರುವ ಸಂದರ್ಭವನ್ನು ಗಮನಿಸಬೇಕು. ಈಗಎರಡೂ ದೇಶಗಳಲ್ಲಿ ಕೋವಿಡ್‌–19ರ ಆತಂಕ ಮತ್ತು ನೋವಿದೆ.

1992ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಕಿರಣ್ ಮೋರೆಯನ್ನು ರೇಗಿಸಿ ಪಾಕ್ ಬ್ಯಾಟ್ಸ್‌ಮನ್ ಜಾವೇದ್ ಮಿಯಾಂದಾದ್ ಕ್ರೀಸ್‍ನಲ್ಲಿ ಮಾಡಿದ ಕಪ್ಪೆ ಜಿಗಿದಿದ್ದರು.

ಯುದ್ಧ ಮತ್ತು ಕ್ರಿಕೆಟ್

ಆ ವರ್ಷ ಉಭಯ ತಂಡಗಳು ಭಾರತದಲ್ಲಿ ಮೊದಲ ಸಲ ಟೆಸ್ಟ್‌ ಸರಣಿ ಆಡಿದ್ದವು. ಎರಡೂ ದೇಶಗಳು ವಿಭಜನೆಯಾಗಿ ಆಗಷ್ಟೇ ಕೇವಲ 5 ವರ್ಷ ಕಳೆದಿತ್ತು. ವಿಭಜನೆಯಿಂದಾಗಿಎರಡೂದೇಶದ ಜನರ ಮನದಲ್ಲಿ ಉರಿಯುತ್ತಿದ್ದದ್ವೇಷದ ಜ್ವಾಲೆ ಸಂಪೂರ್ಣವಾಗಿ ಆರಿರಲಿಲ್ಲ. ಗೆಲುವಿಗಾಗಿ ಎರಡೂ ತಂಡಗಳು ಹಾತೊರೆದಿದ್ದವು.

ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಭಾರತ 70 ರನ್‌ಗಳಿಂದಗೆದ್ದು ಬೀಗಿತ್ತು. ಆದರೆ, ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಿದ್ದ ಪಾಕ್‌, 43 ರನ್‌ ಹಾಗೂ ಇನಿಂಗ್ಸ್‌ ಅಂತರದಿಂದ ಗೆಲುವು ಸಾಧಿಸಿತ್ತು. ಮೂರನೇ ಪಂದ್ಯದಲ್ಲಿ ಮತ್ತೆ ಭಾರತಕ್ಕೆ ಜಯ ಲಭಿಸಿತು. ನಾಲ್ಕು ಮತ್ತು ಐದನೇ ಪಂದ್ಯಗಳು ಡ್ರಾ ಆದವು.

ಅದಾದ ಬಳಿಕ 1960ರ ವರೆಗೆ ಆಡಿದ ಮುಂದಿನ 10 ಟೆಸ್ಟ್‌ ಪಂದ್ಯಗಳು ಡ್ರಾನಲ್ಲಿ ಅಂತ್ಯಕಂಡವು. ಎರಡೂ ತಂಡಗಳ ನಡುವಣ ಪೈಪೋಟಿಯನ್ನು ಅರ್ಥೈಸಲು ಈ ಅಂಕಿ ಅಂಶಗಳು ಸಾಕು.

1965 ಹಾಗೂ 71ರಲ್ಲಿ ಎರಡೂ ದೇಶಗಳ ನಡುವೆ ಯುದ್ಧಗಳು ನಡೆದದ್ದರಿಂದ, 1962-77 ರ ಅವಧಿಯಲ್ಲಿ ದ್ವಿಪಕ್ಷೀಯ ಕ್ರಿಕೆಟ್‌ಗೆ ಬ್ರೇಕ್‌ ಬಿದ್ದಿತು.ನಂತರ 1978–79ರಲ್ಲಿ ಮುಖಾಮುಖಿಯಾಗಿ ಮೂರು ಟೆಸ್ಟ್‌ ಆಡಿದ ಈ ತಂಡಗಳು ತಲಾ ಒಂದೊಂದು ಜಯ ಸಾಧಿಸಿದವು.

ಕ್ರಿಕೆಟ್ ಸಂಬಂಧ ಸುಧಾರಿಸಿದ್ದ ಕಾಲವೂ ಇತ್ತು

1980-90ರ ದಶಕದಲ್ಲಿ ನೀವು ಕ್ರಿಕೆಟ್ ಆರಾಧಿಸಿದ್ದರೆಭಾರತ ತಂಡದಅಭಿಮಾನಿಯಾಗಿ ಸಂತಸಪಟ್ಟದ್ದಕ್ಕಿಂತ ಹೆಚ್ಚು ಬೇಸರವೇ ಆಗಿರುತ್ತೆ.ಭಾರತ ಕ್ರಿಕೆಟ್ತಂಡದ ಮೇಲೆ ಪಾಕಿಸ್ತಾನದ ಮೇಲುಗೈ ಸಾಧಿಸಿತ್ತು.ಸುನೀಲ್‌ ಗವಾಸ್ಕರ್‌, ಕೆ.ಶ್ರೀಕಾಂತ್‌, ರವಿಶಾಸ್ತ್ರಿ, ಕಪಿಲ್‌ ದೇವ್‌, ನವಜೋತ್‌ ಸಿಂಗ್‌ ಸಿಧು, ಮೊಹಮದ್‌ ಅಜರುದ್ದಿನ್‌ ಅಂದಿನ ನಮ್ಮ ಹೀರೋಗಳಾಗಿದ್ದರು. ಅದಾದ ಬಳಿಕ ಆ ಸಾಲಿಗೆ ಸಚಿನ್‌ ತೆಂಡೂಲ್ಕರ್‌, ಅನಿಲ್‌ ಕುಂಬ್ಳೆ, ಜಾವಗಲ್‌ ಶ್ರೀನಾಥ್‌ ಸೇರಿಕೊಂಡರು.

ಆಗ ಪಾಕಿಸ್ತಾನ ತಂಡದಬೌಲಿಂಗ್‌ ವಿಭಾಗದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದರು. ಶ್ರೇಷ್ಠ ವೇಗಿ ಇಮ್ರಾನ್‌ ಖಾನ್‌, ಆತ್ಮ ವಿಶ್ವಾಸದ ಗಣಿ ವಾಸಿಮ್ ಅಕ್ರಂ, ಎದುರಾಳಿಗಳನ್ನು ಕೆಣಕುತ್ತಿದ್ದ ಜಾವೇದ್‌ ಮಿಯಾಂದಾದ್‌, ಸಲೀಂ ಮಲಿಕ್‌ ಭಾರತದ ಅಭಿಮಾನಿಗಳಲ್ಲಿ ಕಿಚ್ಚು ಹೊತ್ತಿಸುವ ಜೊತೆಗೆ ಆತಂಕವನ್ನೂ ಉಂಟುಮಾಡುತ್ತಿದ್ದರು.

21ನೇ ಶತಮಾನದ ಆರಂಭದ ನಂತರ ನಿಧಾನವಾಗಿ ಕ್ರಿಕೆಟ್‌ನಲ್ಲಿಭಾರತದ ಪ್ರಾಬಲ್ಯ ಹೆಚ್ಚಲಾರಂಭಿಸಿತು. ಅದು ಇಂದಿಗೂ ಮುಂದುವರಿದಿದೆ.

ಏಷ್ಯಾಕಪ್ ಸೋಲಿನ ನೋವು

​1986ರಏಷ್ಯಾಕಪ್‌ನಲ್ಲಿ ಇತ್ತಂಡಗಳು ಫೈನಲ್‌ಗೇರಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 245 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಕೇವಲ ಒಂದು ವಿಕೆಟ್‌ ಅಂತರದಿಂದ ಗೆದ್ದಿತ್ತು. ಶಾರ್ಜಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಚೇತನ್ ಶರ್ಮಾರ ಕೊನೆಯ ಓವರ್ ಬೌಲಿಂಗ್ ಮಾಡುತ್ತಿದ್ದರು. ಕೊನೆಯ ಎಸೆತದಲ್ಲಿ ಪಾಕಿಸ್ತಾನಕ್ಕೆ 4 ರನ್ ಬೇಕಿತ್ತು. ಪಾಕ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ ಜಾವೆದ್ ಮಿಯಂದಾದ್ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿದ್ದರು. ಈ ಸೋಲು ಬಹುಕಾಲ ಭಾರತೀಯ ಆಟಗಾರರನ್ನು ಕಾಡಿತ್ತು.

ಪ್ರಾಬಲ್ಯದ ಮೇಲಾಟ

2000ನೇ ವರ್ಷದವರೆಗಿನ ಸೋಲು–ಗೆಲುವಿನ ಅಂಕಿ ಅಂಶಗಳು ಭಾರತದ ಮಟ್ಟಿಗೆ ಆಘಾತಕಾರಿ. ಅಲ್ಲಿಯವರೆಗೆ 77ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದ ಭಾರತ 46 ಪಂದ್ಯಗಳನ್ನು ಕೈಚೆಲ್ಲಿ ಕೇವಲ 27ರಲ್ಲಷ್ಟೇ ಗೆದ್ದಿತ್ತು. ಉಳಿದ ನಾಲ್ಕು ಪಂದ್ಯಗಳ ಫಲಿತಾಂಶ ಕಂಡಿರಲಿಲ್ಲ. 47 ಟೆಸ್ಟ್‌ ಪಂದ್ಯಗಳಲ್ಲಿ 5 ಗೆಲುವು ಕಂಡಿದ್ದ ಟೀಂ ಇಂಡಿಯಾ 9 ಸೋಲು ಅನುಭವಿಸಿತ್ತು. ಉಳಿದ 33 ಪಂದ್ಯಗಳು ಡ್ರಾ ಆಗಿದ್ದವು.

2001 ದಿಂದ ಈಚೆಗೆ ಭಾರತದ ಪ್ರಾಬಲ್ಯ ವೃದ್ಧಿಸಿದೆ. ಈ ಅವಧಿಯಲ್ಲಿ ಆಡಿರುವ 47 ಏಕದಿನ ಪಂದ್ಯಗಳಲ್ಲಿ 26 ಜಯ ಸಾಧಿಸಿದೆ. 2010ರಿಂದ ಈಚೆಗಂತೂ ಪಾಕ್‌ ಮೇಲೆ ಟೀಂ ಇಂಡಿಯಾದ ಹಿಡಿತ ಬಿಗಿಗೊಂಡಿದೆ. 14 ಪಂದ್ಯಗಳಲ್ಲಿ 10ರಲ್ಲಿ ಜಯ ಸಾಧಿಸಿ ಬೀಗಿದೆ.

ಈ ತಂಡಗಳ ನಡುವೆ ಇದುವರೆಗೆ ಒಟ್ಟು 59 ಟೆಸ್ಟ್ ಪಂದ್ಯಗಳು ನಡದಿವೆ. ಭಾರತ 9ರಲ್ಲಿಜಯ ಸಾಧಿಸಿದ್ದರೆ, ಪಾಕ್‌ 12ರಲ್ಲಿ ಜಯ ಸಾಧಿಸಿದೆ. ಉಳಿದ 38 ಪಂದ್ಯಗಳು ಡ್ರಾ ಆಗಿವೆ. ಪಾಕ್‌ ವಿರುದ್ಧ ಒಟ್ಟು 8 ಟಿ20 (ವಿಶ್ವಕಪ್‌ ಸೇರಿ) ಪಂದ್ಯಗಳನ್ನು ಆಡಿರುವ ಭಾರತ 7 ಜಯ ಸಾಧಿಸಿದೆ.ಈ ಎರಡೂ ತಂಡಗಳ ನಿಜವಾದ ಪೈಪೋಟಿ ಕಂಡುಬರುವುದು ಏಕದಿನ ಪಂದ್ಯಗಳಲ್ಲಿ. ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ಭಾರತ, ಪಾಕ್‌ ವಿರುದ್ಧ 7–0 ಅಜೇಯ ದಾಖಲೆ ಹೊಂದಿರುವುದನ್ನು ವಿವರಿಸಬೇಕಿಲ್ಲ.

80, 90ರ ದಶಕದಲ್ಲಿ ಆಡಿದ ಬಹುತೇಕ ಆಟಗಾರರು 2000 ವರ್ಷದ ಹೊತ್ತಿಗೆ ಕ್ರಿಕೆಟ್‌ನಿಂದ ನಿವೃತ್ತಿಹೊಂದಿದ್ದರು. 1986ರಲ್ಲಿ ನಡೆದ ಏಷ್ಯಾಕಪ್‌ ಫೈನಲ್‌ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್‌ ಸಿಡಿಸಿ ಮಿಂಚಿದ್ದ ಜಾವೇದ್ ಮಿಯಾಂದಾದ್‌ನಂತಹ ಆಟಗಾರರು ಮತ್ತೆ ಪಾಕ್‌ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಆದಾಗ್ಯೂ ಒಂದು ಅಂಶ ಸ್ಪಷ್ಟ. ಪಾಕ್‌ ಆಗಿನಂತಯೇ ಈಗಲೂ ಭಾರತ ವಿರುದ್ಧ ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳದು. ಛಲದ ಆಟ ಆ ತಂಡದಲ್ಲಿ ಈಗಲೂ ಮುಂದುವರಿದಿದೆ.

ಆ ತಂಡದಲ್ಲಿ 80ರ ದಶಕದಲ್ಲಿದ್ದಂತಹ ವೇಗದ ಬೌಲರ್‌ಗಳು ಈಗಲೂ ಇದ್ದಾರೆ. ಅವರು ಪ್ರಾಬಲ್ಯವನ್ನು ಭಾರತದ ತೆಕ್ಕೆಯಿಂದ ತಮ್ಮತ್ತ ವಾಲಿಸಿಕೊಳ್ಳುವ ಸಮರ್ಥ್ಯ ಹೊಂದಿದ್ದಾರೆ.

ಉಭಯ ತಂಡಗಳ ಏಕದಿನ ಮುಖಾಮುಖಿ
1985ರ ವರೆಗೆ:ಒಟ್ಟು ಪಂದ್ಯಗಳು 16

ಭಾರತಕ್ಕೆ 8 ಜಯ
ಪಾಕಿಸ್ತಾನಕ್ಕೆ 7 ಜಯ
1 ಫಲಿತಾಂಶ ರಹಿತ

1986ರಿಂದ 2000 ವರೆಗೆ:ಒಟ್ಟು ಪಂದ್ಯಗಳು 61
ಭಾರತಕ್ಕೆ 19 ಜಯ
ಪಾಕಿಸ್ತಾನಕ್ಕೆ 39 ಜಯ
3 ಫಲಿತಾಂಶ ರಹಿತ

2001ರ ನಂತರ:ಒಟ್ಟು ಪಂದ್ಯಗಳು 47
ಭಾರತಕ್ಕೆ 26 ಜಯ
ಪಾಕಿಸ್ತಾನಕ್ಕೆ 21 ಜಯ

ಉಭಯ ತಂಡಗಳ ಟೆಸ್ಟ್‌ ಮುಖಾಮುಖಿ
1985ರ ವರೆಗೆ:ಒಟ್ಟು ಪಂದ್ಯಗಳು 35

ಭಾರತಕ್ಕೆ 4 ಜಯ
ಪಾಕಿಸ್ತಾನಕ್ಕೆ 6 ಜಯ
25 ಡ್ರಾ

1986ರಿಂದ 2000 ವರೆಗೆ:ಒಟ್ಟು ಪಂದ್ಯಗಳು 12
ಭಾರತಕ್ಕೆ 1 ಜಯ
ಪಾಕಿಸ್ತಾನಕ್ಕೆ 3 ಜಯ
8 ಡ್ರಾ

2001ರ ನಂತರ:ಒಟ್ಟು ಪಂದ್ಯಗಳು 12
ಭಾರತಕ್ಕೆ 4 ಜಯ
ಪಾಕಿಸ್ತಾನಕ್ಕೆ 3 ಜಯ
5 ಡ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT