ಭಾನುವಾರ, ಮಾರ್ಚ್ 26, 2023
23 °C

ಯಶ್‌ಪಾಲ್ ಶರ್ಮಾ ನಿಧನ: ಸಾಮಾಜಿಕ ತಾಣಗಳಲ್ಲಿ ಕ್ರಿಕೆಟಿಗನ ಸ್ಮರಣೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Yashpal Sharma (Image Credit- @venkateshprasad Twitter)

ಬೆಂಗಳೂರು: ಟೀಮ್ ಇಂಡಿಯಾ 1983ರಲ್ಲಿ ವಿಶ್ವಕಪ್ ಗೆದ್ದ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯಶ್‌ಪಾಲ್ ಶರ್ಮಾ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕ್ರಿಕೆಟಿಗ ಯಶ್‌ಪಾಲ್ ಶರ್ಮಾ ನಿಧನಕ್ಕೆ ಕ್ರೀಡಾ ಕ್ಷೇತ್ರ ಮಾತ್ರವಲ್ಲದೆ, ವಿವಿಧ ರಂಗದ ಗಣ್ಯರು, ಜನಸಾಮಾನ್ಯರು ಕಂಬನಿ ಮಿಡಿದಿದ್ದಾರೆ.

ಅಲ್ಲದೆ, ಸಾಮಾಜಿಕ ತಾಣಗಳಲ್ಲಿ ಕೂಡ ಯಶ್‌ಪಾಲ್ ಶರ್ಮಾ ಕುರಿತು ವಿವಿಧ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಯಶ್‌ಪಾಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ, ಟ್ವೀಟ್ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್, ಅನುರಾಗ್ ಠಾಕೂರ್, ವೀರೇಂದ್ರ ಸೆಹ್ವಾಗ್, ವೆಂಕಟೇಶ್ ಪ್ರಸಾದ್, ಗೌತಮ್ ಗಂಭೀರ್, ರವಿ ಶಾಸ್ತ್ರಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇಶಾಂತ್ ಶರ್ಮಾ, ಶಿಖರ್ ಧವನ್, ಜಗತ್ ಪ್ರಕಾಶ್ ನಡ್ಡಾ ಸಹಿತ ಹಲವು ಪ್ರಮುಖರು ಯಶ್‌ಪಾಲ್ ನಿಧನಕ್ಕೆ ಸಂತಾಪ ಸೂಚಿಸಿ, ಟ್ವೀಟ್ ಮಾಡುವ ಮೂಲಕ ಖ್ಯಾತ ಕ್ರಿಕೆಟಿಗನನ್ನು ನೆನಪಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು