ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿ ಬ್ರದರ್‌... ಇದನ್ನೇ ಕರ್ಮ ಅನ್ನುವುದು: ಅಖ್ತರ್‌ಗೆ ಶಮಿ ಗುದ್ದು

Last Updated 13 ನವೆಂಬರ್ 2022, 14:18 IST
ಅಕ್ಷರ ಗಾತ್ರ

ನವದೆಹಲಿ: ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಇಂಗ್ಲೆಂಡ್ ವಿರುದ್ಧ ಸೋಲುತ್ತಲೇ ಟ್ವಿಟರ್‌ನಲ್ಲಿ ಬೇಸರ ಹಂಚಿಕೊಂಡಿದ್ದ ಪಾಕ್‌ನ ಮಾಜಿ ವೇಗದ ಬೌಲರ್‌ ಶೋಯಬ್‌ ಅಖ್ತರ್‌ ಅವರನ್ನು ಭಾರತದ ವೇಗಿ ಮೊಹಮ್ಮದ್‌ ಶಮಿ ಕೆಣಕಿದ್ದಾರೆ.

ಫೈನಲ್‌ಲ್ಲಿ ಪಾಕಿಸ್ತಾನ ವಿರುದ್ಧ ಐದು ವಿಕೆಟ್‌ ಅಂತರದ ಗೆಲುವು ದಾಖಲಿಸಿರುವ ಇಂಗ್ಲೆಂಡ್ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತು.

ಪಂದ್ಯದ ಫಲಿತಾಂಶದ ನಂತರ ಅಖ್ತರ್‌ ಅವರು ‘ಛಿದ್ರ ಹೃದಯ’ದ ಇಮೋಜಿಯನ್ನು ಪ್ರಕಟಿಸಿದ್ದರು.

ಅಖ್ತರ್‌ ಮಾಡಿದ್ದ ಟ್ವೀಟ್‌ ಅನ್ನು ರೀಟ್ವೀಟ್‌ ಮಾಡಿರುವ ಶಮಿ ‘ಸಾರಿ ಬ್ರದರ್‌, ಇದನ್ನೇ ಕರ್ಮ ಎನ್ನುವುದು...’ ಎಂದು ಗೇಲಿ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಒಂದೇ ಒಂದು ವಿಕೆಟನ್ನೂ ಪಡೆಯದೇ ಸೋತ ಭಾರತವನ್ನು ಅಖ್ತರ್ ಈ ಹಿಂದೆ ಲೇವಡಿ ಮಾಡಿದ್ದರು.

ಜಿಂಬಾಬ್ವೆ ಮತ್ತು ನೆದರ್ಲೆಂಡ್ಸ್‌ ತಂಡವನ್ನು ಸೋಲಿಸಿ ಸೆಮಿಫೈನಲ್‌ ತಲುಪುವುದು ದೊಡ್ಡ ಸಾಧನೆಯೆ ಎಂದು ಅವರು ಭಾರತವನ್ನು ಮೂದಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT