ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಂಡಿಸ್, ಕರುಣರತ್ನೆ ಮಿಂಚು: ಲಂಕಾ ಜಯಭೇರಿ

Published 4 ಜೂನ್ 2023, 15:46 IST
Last Updated 4 ಜೂನ್ 2023, 15:46 IST
ಅಕ್ಷರ ಗಾತ್ರ

ಹಂಬಂಟೋಟ: ಕುಶಾಲ ಮೆಂಡಿಸ್ ಮತ್ತು ದಿಮುತ ಕರುಣರತ್ನೆ ಅವರ ಅರ್ಧಶತಕಗಳ ಬಲದಿಂದ ಶ್ರೀಲಂಕಾ ತಂಡವು ಅಫ್ಗಾನಿಸ್ತಾನ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಜಯಭೇರಿ ಬಾರಿಸಿತು.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೆಂಡಿಸ್ (78 ರನ್ ) ಹಾಗೂ ದಿಮುತ (52ರನ್) ಅವರ ಬ್ಯಾಟಿಂಗ್ ನೆರವಿನಿಂದ ಲಂಕಾ ತಂಡವು 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 324 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಅಫ್ಗಾನಿಸ್ತಾನ ತಂಡಕ್ಕೆ 42.1 ಓವರ್‌ಗಳಲ್ಲಿ 191 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಲಂಕಾ ತಂಡವು 132 ರನ್‌ಗಳ ಭಾರಿ ಗೆಲುವು ಸಾಧಿಸಿ, ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು. ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ಇದೇ  7ರಂದು ನಡೆಯಲಿದೆ.

ಲಂಕಾ ತಂಡದ ಆರಂಭಿಕ ಜೋಡಿ ಪಥುಮ್ ನಿಸಾಂಕ ಹಾಗೂ ಕರುಣರತ್ನೆ ಮೊದಲ ವಿಕೆಟ್ ಜೊತೆಯಾಟದಲ್ಲಿ 82 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ಪಥುಮ್ 56 ಎಸೆತಗಳಲ್ಲಿ 43 ರನ್‌ ಗಳಿಸಿದರು. ಕರುಣರತ್ನೆ 62 ಎಸೆತಗಳಲ್ಲಿ 52 ರನ್‌ ಗಳಿಸಿದರು. ಅದರಲ್ಲಿ ಏಳು ಬೌಂಡರಿಗಳಿದ್ದವು. ಇವರಿಬ್ಬರೂ ಔಟಾದ ನಂತರ ಜೊತೆಗೂಡಿದ ಮೆಂಡಿಸ್ ಹಾಗೂ ಸಮರವಿಕ್ರಮ (44; 46ಎ) ಮೂರನೇ ವಿಕೆಟ್ ಜೊತೆಯಾಟದಲ್ಲಿ  88 ರನ್‌ ಸೇರಿಸಿದರು.  ಕೊನೆಯಲ್ಲಿ ಕ್ರೀಸ್‌ಗೆ ಬಂದ ವನಿಂದು ಹಸರಂಗ 12 ಎಸೆತಗಳಲ್ಲಿ 29 ರನ್‌ ಗಳಿಸುವ ಮೂಲಕ ತಂಡದ ಮೊತ್ತವು 300ರ ಗಡಿ ದಾಟಲು ಕಾಣಿಕೆ ನೀಡಿದರು.  ಅಫ್ಗನ್ ತಂಡದ ಮಹಮ್ಮದ್‌ ನಬಿ, ಫರೀದ್‌ ಅಹಮ್ಮದ್‌ ತಲಾ ಎರಡು ವಿಕೆಟ್‌ ಪಡೆದರು.

ಕಠಿಣ ಗುರಿಯನ್ನು ಬೆನ್ನತ್ತಿದ ಆಫ್ಗಾನ್‌ ತಂಡ  ಇಬ್ರಾಹಿಂ ಜದ್ರಾನ್ (54 ರನ್‌), ನಾಯಕ ಹಶ್ಮುತುಲ್ಲ ಶಾಹೀದಿ (57 ರನ್‌) ಅವರ ಹೋರಾಟಕ್ಕೆ ಗೆಲುವು ಒಲಿಯಲಿಲ್ಲ.  ಕೊನೆಯ 45 ರನ್‌ ಗಳಿಸುವಷ್ಟರಲ್ಲಿ 8 ವಿಕೆಟ್‌ ಪತನಗೊಂಡಿವು. ಲಂಕಾದ ವನಿಂದು ಹಸರಂಗ ಮತ್ತು ಧನಂಜಯ ಡಿಸಿಲ್ವಾ ತಲಾ ಮೂರು ವಿಕೆಟ್‌ ಕಬಳಿಸಿದರು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 324 (ಕುಶಾಲ ಮೆಂಡಿಸ್‌ 78, ದಿಮುತ್‌ ಕರುಣರತ್ನೆ 52, ಸಾದೀರ ಸಮರವಿಕ್ರಮ 44, ಪಥುಮ್‌ ನಿಸ್ಸಾಂಕ 44, ಮಹಮ್ಮದ್‌ ನಬಿ 52ಕ್ಕೆ 2, ಫರೀದ್‌ ಅಹಮ್ಮದ್‌ 61ಕ್ಕೆ 2). ಆಫ್ಗಾನಿಸ್ತಾನ 42.1 ಓವರ್‌ಗಳಲ್ಲಿ 191 (ಹಶ್ಮುತುಲ್ಲ ಶಾಹೀದಿ 57, ಇಬ್ರಾಹಿಂ ಜದ್ರಾನ್ 54, ರೆಹಮತ್‌ ಶಾ 36, ಧನಂಜಯ ಡಿಸಿಲ್ವಾ 39ಕ್ಕೆ 3, ವಣಿಂದು ಹಸರಂಗ 42ಕ್ಕೆ 3, ದುಷ್ಯಂತ ಚಾಮೀರ 18ಕ್ಕೆ 2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT