ಮಂಗಳವಾರ, ಆಗಸ್ಟ್ 16, 2022
22 °C

ಸ್ಟೀವನ್ ಸ್ಮಿತ್‌ಗೆ ಬೆನ್ನುನೋವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಡಿಲೇಡ್: ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಮಂಗಳವಾರ ಬೆನ್ನುನೋವಿನ ಕಾರಣ ನೆಟ್ಸ್‌ ನಲ್ಲಿ ಅಭ್ಯಾಸ ಮಾಡಲಿಲ್ಲ.

ಇದೇ 17ರಿಂದ ಭಾರತದ ಎದುರು ಆರಂಭವಾಗಲಿರುವ ಟೆಸ್ಟ್‌ ಸರಣಿಗಾಗಿ ಉಭಯ ತಂಡಗಳ ಆಟಗಾರರ ಸಿದ್ದತೆ ನಡೆಯುತ್ತಿದೆ. ಇನ್ನೆರಡು ದಿನ ಬಾಕಿಯಿರುವಾಗ ಸ್ಮಿತ್ ಅಭ್ಯಾಸ ತಪ್ಪಿಸಿರುವುದು ತಂಡದಲ್ಲಿ ಆತಂಕ ಮೂಡಿಸಿದೆ.

ಅಡಿಲೇಡ್ ಓವಲ್ ಕ್ರೀಡಾಂಗಣಕ್ಕೆ ಬಂದ ಅವರು ತಮ್ಮ ಸಹಆಟಗಾರರೊಂದಿಗೆ 10 ನಿಮಿಷಗಳ ಓಟ ಮತ್ತು ಲಘು ವ್ಯಾಯಾಮ ಮಾಡಿದರು. ಆದರೆ ಫುಟ್‌ಬಾಲ್ ಆಡಲಿಲ್ಲ. ಡ್ರೆಸ್ಸಿಂಗ್ ಕೋಣೆಗೆ ಮರಳಿ ವಿಶ್ರಾಂತಿ ಪಡೆದರು. ಅಭ್ಯಾಸದ ಸಂದರ್ಭದಲ್ಲಿ ಚೆಂಡನ್ನು ಎತ್ತಿಕೊಳ್ಳಲು ಬಾಗಿದಾಗ ಬೆನ್ನುನೋವು ಅನುಭವಿಸಿದ್ದರು. ಅದರಿಂದಾಗಿ ತಂಡದ ಫಿಸಿಯೊ ಡೇವಿಡ್ ಬೇಕ್ಲಿ ಅವರಿಂದ ಚಿಕಿತ್ಸೆ ಪಡೆದಿದ್ದಾರೆ. 31 ವರ್ಷದ ಸ್ಮಿತ್ ಆಸ್ಟ್ರೇಲಿಯಾ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರ ಫಿಟ್‌ನೆಸ್ ಕುರಿತು ಬುಧವಾರ ಸಂಜೆಯವರೆಗೆ ಸ್ಪಷ್ಟತೆ ಸಿಗಲಿದೆ ಎಂದು ತಂಡದ ಮೂಲಗಳು ತಿಳಿಸಿವೆ.

ಈಚೆಗೆ ಭಾರತದ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಅವರು ಮಿಂಚಿನ ಶತಕಗಳನ್ನು ಗಳಿಸಿದ್ದರು.

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮತ್ತು ವಿಲ್ ಪುಕೊವಸ್ಕಿ ಅವರು ಗಾಯಗೊಂಡಿದ್ದು ಮೊದಲ ಟೆಸ್ಟ್‌ನಲ್ಲಿ ಆಡುತ್ತಿಲ್ಲ. ಆದ್ದರಿಂದ ಸ್ಮಿತ್ ಮೇಲೆ ನಿರೀಕ್ಷೆ ಹೆಚ್ಚಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು