ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup: ಭಾರತ, ಬಾಂಗ್ಲಾ ನಡುವಿನ ಕ್ರಿಕೆಟ್‌ ಪಂದ್ಯದ ಪ್ರಮುಖ ಹೈಲೈಟ್ಸ್‌

Published 23 ಜೂನ್ 2024, 3:41 IST
Last Updated 23 ಜೂನ್ 2024, 3:41 IST
ಅಕ್ಷರ ಗಾತ್ರ

ನಾರ್ತ್‌ಸೌಂಡ್: ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಬಾರತ ತಂಡ ಬಾಂಗ್ಲಾ ದೇಶವನ್ನು ಮಣಿಸಿತು. 

ಸೂಪರ್ 8ರ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 50 ರನ್‌ಗಳಿಂದ ಜಯಭೇರಿ ಬಾರಿಸಿದ ಭಾರತ ತಂಡವು ಸೆಮಿಫೈಲ್‌ನತ್ತ ಮತ್ತೊಂದು ಹೆಜ್ಜೆ ಇಟ್ಟಿತು.

ಈ ಪಂದ್ಯದ ಹೈಲೈಟ್ಸ್...

  • ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಅಜೇಯ ಓಟವೂ ಮುಂದುವರಿಯಿತು.

  • ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಭಾರತ ತಂಡ ಪವರ್‌ ಪ್ಲೆನಲ್ಲಿ ಉತ್ತಮ ರನ್‌ ಗಳಿಕೆ ಮಾಡಿತು.

  • ಈ ಪಂದ್ಯದಲ್ಲಿ ಭಾರತದ ಹಾರ್ದಿಕ್ ಪಾಂಡ್ಯ ಆಲ್‌ರೌಂಡ್ ಆಟ ಆಡಿದರು. ಅಜೇಯ 50 ರನ್‌ ಹೊಡೆದರು. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇದು ಅವರ 4ನೇ ಅರ್ಧಶತಕವಾಗಿದೆ.

  • ಭಾರತ ಈ ಪಂದ್ಯದಲ್ಲಿ ಒಟ್ಟು 13 ಸಿಕ್ಸ್‌ ಬಾರಿಸಿತು. 

  • ಕುಲದೀಪ್‌ ಮೂರು ವಿಕೆಟ್, ಅರ್ಷದೀಪ್ ಸಿಂಗ್, ಜಸ್‌ಪ್ರೀತ್ ಬೂಮ್ರಾ ತಲಾ 2 ವಿಕೆಟ್‌ ಪಡೆದರು.

  • ಬಾಂಗ್ಲಾ ಪರ ಶ್ಯಾಂಟೊ 40 ರನ್‌ ಹೊಡೆದರು. ತಂಜೀಮ್‌, ರಶೀದ್‌ ತಲಾ 2 ವಿಕೆಟ್‌ ಪಡೆದರು.

ಸ್ಕೋರ್‌...

ಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 196

ಬಾಂಗ್ಲಾ: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 146 

ಭಾರತಕ್ಕೆ 50 ರನ್‌ ಗೆಲುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT