ಬಾರ್ಬೊಡಸ್: ಮೈಕೆಲ್ ಲೀಸ್ಕ್ ಅವರ ಆಲ್ರೌಂಡ್ ಆಟದ ನೆರವಿನಿಂದ ಸ್ಕಾಟ್ಲೆಂಟ್ ತಂಡವು ಶುಕ್ರವಾರ ನಮೀಬಿಯಾ ತಂಡವನ್ನು ಐದು ವಿಕೆಟ್ಗಳಿಂದ ಮಣಿಸಿ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೆ ಏರಿತು.

ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ ತಂಡವು ನಾಯಕ ಗೆರ್ಹಾರ್ಡ್ ಎರಾಸ್ಮಸ್ (52; 31ಎಸೆತ) ಅವರ ಅರ್ಧಶತಕದ ಬಲದಿಂದ 20 ಓವರ್ಗಳಲ್ಲಿ 9 ವಿಕೆಟ್ಗೆ 155 ರನ್ ಕಲೆಹಾಕಿತು. ಬ್ರಾಡ್ ವೀಲ್ ಮತ್ತು ಬ್ರಾಡ್ ಕ್ಯೂರಿ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಪಡೆದರು.

ಸ್ಕಾಟ್ಲೆಂಟ್ ತಂಡವು ಇನ್ನೂ 9 ಎಸೆತ ಬಾಕಿ ಇರುವಂತೆ 5 ವಿಕೆಟ್ಗೆ 157 ರನ್ ಗಳಿಸಿ ಗುರಿ ತಲುಪಿತು. ನಾಯಕ ರಿಚಿ ಬೆರಿಂಗ್ಟನ್ (ಔಟಾಗದೇ 47; 35) ಮತ್ತು ಮೈಕೆಲ್ ಲೀಸ್ಕ್ (35;17ಎ) ಗೆಲುವಿನಲ್ಲಿ ಪ್ರಮುಖ ಪ್ರಮುಖ ಪಾತ್ರ ವಹಿಸಿದರು. ನಮೀಬಿಯಾ ವಿರುದ್ಧದ ನಾಲ್ಕು ಟಿ20 ಪಂದ್ಯಗಳಲ್ಲಿ ಸ್ಕಾಟ್ಲೆಂಡ್ಗೆ ಇದು ಮೊದಲ ಜಯವಾಗಿದೆ.

ಸಂಕ್ಷಿಪ್ತ ಸ್ಕೋರ್: ನಮೀಬಿಯಾ: 20 ಓವರ್ಗಳಲ್ಲಿ 9 ವಿಕೆಟ್ಗೆ 155 (ಗೆರ್ಹಾರ್ಡ್ ಎರಾಸ್ಮಸ್ 52, ಜೇನ್ ಗ್ರೀನ್ 28; ಬ್ರಾಡ್ ವೀಲ್ 33ಕ್ಕೆ 3, ಬ್ರಾಡ್ ಕ್ಯೂರಿ 16ಕ್ಕೆ 2, ಮೈಕೆಲ್ ಲೀಸ್ಕ್ 16ಕ್ಕೆ 1). ಸ್ಕಾಟ್ಲೆಂಡ್: 20 ಓವರ್ಗಳಲ್ಲಿ 5 ವಿಕೆಟ್ಗೆ 157 (ಮೈಕೆಲ್ ಜಾನ್ಸ್ 26, ರಿಚಿ ಬೆರಿಂಗ್ಟನ್ ಔಟಾಗದೇ 47, ಮೈಕೆಲ್ ಲೀಸ್ಕ್ 35; ಗೆರ್ಹಾರ್ಡ್ ಎರಾಸ್ಮಸ್ 29ಕ್ಕೆ 2). ಪಂದ್ಯದ ಆಟಗಾರ: ಮೈಕೆಲ್ ಲೀಸ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.