T20 World Cup: ಸೆಮಿಫೈನಲ್‌ನಲ್ಲಿ ಯಾರು ಯಾರನ್ನು ಎದುರಿಸಲಿದ್ದಾರೆ?

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತಕ್ಕೆ ವೇದಿಕೆ ಸಜ್ಜುಗೊಂಡಿದೆ.
ಸೂಪರ್-12 ಹಂತದಲ್ಲಿ ಗ್ರೂಪ್ 1ರಿಂದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ತೇರ್ಗಡೆಯನ್ನು ಹೊಂದಿವೆ. ಹಾಗೆಯೇ ಗ್ರೂಪ್ 2ರಿಂದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಅಂತಿಮ ನಾಲ್ಕರ ಘಟ್ಟವನ್ನು ಪ್ರವೇಶ ಪಡೆದಿವೆ.
ಇದನ್ನೂ ಓದಿ: T20 WC: ಸೆಮಿಫೈನಲ್ ರೇಸ್ನಿಂದ ಹೊರಬಿದ್ದ ಭಾರತ; ಟ್ರೋಲ್ ಸುರಿಮಳೆ
ಸೆಮಿಫೈನಲ್‌ನಲ್ಲಿ ಒಂದನೇ ಗುಂಪಿನ ಅಗ್ರಸ್ಥಾನಿಯಾಗಿರುವ ಇಂಗ್ಲೆಂಡ್‌ಗೆ ನ್ಯೂಜಿಲೆಂಡ್‌ನ ಸವಾಲು ಎದುರಾಗಲಿದೆ. ಹಾಗೆಯೇ ಎರಡನೇ ಗುಂಪಿನ ಅಗ್ರಸ್ಥಾನಿಯಾಗಿರುವ ಪಾಕಿಸ್ತಾನಕ್ಕೆ ಆಸ್ಟ್ರೇಲಿಯಾದ ಸವಾಲು ಎದುರಾಗಲಿದೆ.
ಸೆಮಿಫೈನಲ್ ವೇಳಾಪಟ್ಟಿ ಇಂತಿದೆ:
ಮೊದಲ ಸೆಮಿಫೈನಲ್:
ನ.10 (ಬುಧವಾರ): ಇಂಗ್ಲೆಂಡ್ vs ನ್ಯೂಜಿಲೆಂಡ್, ಅಬುಧಾಬಿ
ಎರಡನೇ ಸೆಮಿಫೈನಲ್:
ನ.11 (ಗುರುವಾರ): ಪಾಕಿಸ್ತಾನ vs ಆಸ್ಟ್ರೇಲಿಯಾ, ದುಬೈ
ಫೈನಲ್: ನ. 14 (ಭಾನುವಾರ), ದುಬೈ.
ಸೂಪರ್-12 ಹಂತದಿಂದ ನಿರ್ಗಮಿಸಿದ ತಂಡಗಳು:
ಗ್ರೂಪ್ 1: ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್‌ಇಂಡೀಸ್, ಬಾಂಗ್ಲಾದೇಶ
ಗ್ರೂಪ್ 2: ಭಾರತ, ಅಫ್ಗಾನಿಸ್ತಾನ, ನಮೀಬಿಯಾ, ಸ್ಕಾಟ್ಲೆಂಡ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.