ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20I: ಇತಿಹಾಸ ಬರೆದ ಅಮೆರಿಕ; ಬಾಂಗ್ಲಾದೇಶ ವಿರುದ್ಧ ಐತಿಹಾಸಿಕ ಗೆಲುವು

Published 22 ಮೇ 2024, 4:13 IST
Last Updated 22 ಮೇ 2024, 4:13 IST
ಅಕ್ಷರ ಗಾತ್ರ

ಹೂಸ್ಟನ್: ಐಸಿಸಿ ಟ್ವೆಂಟಿ-20 ವಿಶ್ವಕಪ್‌ ಆರಂಭಕ್ಕೂ ಮುನ್ನ ಅತಿಥೇಯ ಅಮೆರಿಕ ಭರ್ಜರಿ ಪೂರ್ವಸಿದ್ಧತೆಯನ್ನು ನಡೆಸುತ್ತಿದೆ. ಟ್ವೆಂಟಿ-20 ಕ್ರಿಕೆಟ್ ಇತಿಹಾಸದಲ್ಲೇ ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಗೆಲುವು ದಾಖಲಿಸಿದೆ.

ಬಾಂಗ್ಲಾದೇಶ ಒಡ್ಡಿದ 157 ರನ್‌ಗಳ ಗುರಿ ಬೆನ್ನಟ್ಟಿದ ಅಮೆರಿಕ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಆ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಐಸಿಸಿ ಖಾಯಂ ಸದಸ್ಯತ್ವ ಹೊಂದಿರುವ ತಂಡದ ವಿರುದ್ಧ ಅಮೆರಿಕ ಗಳಿಸಿರುವ ಎರಡನೇ ಜಯ ಇದಾಗಿದೆ. 2021ರಲ್ಲಿ ಐರ್ಲೆಂಡ್ ವಿರುದ್ಧ ಜಯ ಸಾಧಿಸಿತ್ತು.

ಆ ಮೂಲಕ ಅಗ್ರ 10ರ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಬಾಂಗ್ಲಾದೇಶಕ್ಕೆ (9ನೇ ರ‍್ಯಾಂಕ್) 19ನೇ ರ‍್ಯಾಂಕಿಂಗ್‌ನಲ್ಲಿರುವ ಅಮೆರಿಕ ಪೆಟ್ಟು ನೀಡಿತು.

ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ತೌಹಿದ್ ಹೃದೋಯ್ ಅರ್ಧಶತಕದ (58) ಬೆಂಬಲದೊಂದಿಗೆ ಆರು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. ಅಮೆರಿಕ ಪರ ಸ್ಟೀವನ್ ಟೇಲರ್ ಎರಡು ವಿಕೆಟ್ ಗಳಿಸಿದರು.

ಬಳಿಕ ಗುರಿ ಬೆನ್ನಟ್ಟಿದ ಅಮೆರಿಕ ಒಂದು ಹಂತದಲ್ಲಿ 14.5 ಓವರ್‌ಗಳಲ್ಲಿ 94 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಮುರಿಯದ ಆರನೇ ವಿಕೆಟ್‌ಗೆ 62 ರನ್‌ಗಳ ಜೊತೆಯಾಟ ಕಟ್ಟಿದ ಹರ್ಮಿತ್ ಸಿಂಗ್ ಹಾಗೂ ಕೋರಿ ಆ್ಯಂಡರ್ಸನ್‌ ತಂಡಕ್ಕೆ ಸ್ಮರಣೀಯ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.

ಹರ್ಮಿತ್ ಕೇವಲ 13 ಎಸೆತಗಳಲ್ಲಿ 33 ರನ್ ಗಳಿಸಿ (3 ಸಿಕ್ಸರ್, 2 ಬೌಂಡರಿ) ಔಟಾಗದೆ ಉಳಿದರು. ಅವರಿಗೆ ತಕ್ಕ ಸಾಥ್ ನೀಡಿದ ಆ್ಯಂಡರ್ಸನ್‌ 25 ಎಸೆತಗಳಲ್ಲಿ ಅಜೇಯ 34 ರನ್ (2 ಸಿಕ್ಸರ್) ಗಳಿಸಿದರು.

ಅಮೆರಿಕ ಗೆಲುವಿನಲ್ಲಿ ಭಾರತೀಯ ಮೂಲದ ಆಟಗಾರರ ಪಾಲು ಹೆಚ್ಚಿದೆ. ಅಲ್ಲದೆ ಅಭಿಮಾನಿಗಳು 'ಮಿನಿ ಟೀಮ್ ಇಂಡಿಯಾ' ಎಂದು ಕೊಂಡಾಡಿದ್ದಾರೆ. ಅಂದ ಹಾಗೆ ಈ ಬಾರಿ ಟ್ವೆಂಟಿ-20 ವಿಶ್ವಕಪ್‌ಗೆ ವೆಸ್ಟ್‌ಇಂಡೀಸ್ ಹಾಗೂ ಅಮೆರಿಕ ಅತಿಥ್ಯ ವಹಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT