ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್‌ | ದಿಲೋನ್ ಪರಿಣಾಮಕಾರಿ ದಾಳಿ: ಕೆನಡಾಗೆ ಜಯ

ಮೊದಲ ಸುತ್ತಿನ ಅಭ್ಯಾಸ ಪಂದ್ಯ
Published 28 ಮೇ 2024, 15:41 IST
Last Updated 28 ಮೇ 2024, 15:41 IST
ಅಕ್ಷರ ಗಾತ್ರ

ಡಲ್ಲಾಸ್, ಅಮೆರಿಕ: ವೇಗಿ ದಿಲೋನ್  ಹ್ಯಾಲಿಗರ್ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಕೆನಡಾ ತಂಡವು ಟಿ20 ವಿಶ್ವಕಪ್‌ಗೆ ಮುನ್ನ ನಡೆಯುತ್ತಿರುವ ಮೊದಲ ಸುತ್ತಿನ ಅಭ್ಯಾಸ ಪಂದ್ಯದಲ್ಲಿ ನೇಪಾಳ ವಿರುದ್ಧ 63 ರನ್‌ಗಳ ಸುಲಭ ಗೆಲುವು ದಾಖಲಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೆನಡಾ ತಂಡವು ನಿಕೋಲಸ್ ಕಿರ್ಟನ್ (52; 39ಎ) ಅವರ ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 183 ರನ್‌ ಗಳಿಸಿತು. ಕೊನೆಯಲ್ಲಿ ರವೀಂದ್ರಪಾಲ್ ಸಿಂಗ್ 17 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ ಸೇರಿದಂತೆ ಔಟಾಗದೇ 41 ರನ್‌ ಗಳಿಸಿ ಮಿಂಚಿದರು.

ಈ ಸವಾಲಿನ ಗುರಿಯನ್ನು ಬೆನ್ನಟ್ಟಿದ ನೇಪಾಳ ತಂಡವು ದಿಲೋನ್‌ (20ಕ್ಕೆ 4) ಅವರ ಬೌಲಿಂಗ್‌ ದಾಳಿಗೆ ತತ್ತರಿಸಿತು. ಹೀಗಾಗಿ, 19.3 ಓವರ್‌ಗಳಲ್ಲಿ 120 ರನ್‌ಗೆ ಕುಸಿಯಿತು.

ಸಂಕ್ಷಿಪ್ತ ಸ್ಕೋರ್‌: ಕೆನಡಾ: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 183 (ನಿಕೋಲಸ್‌ ಕಿರ್ಟನ್‌ 51, ರವೀಂದ್ರಪಾಲ್‌ ಸಿಂಗ್‌ ಔಟಾಗದೇ 41; ಅವಿನಾಶ್ ಬೋಹ್ರಾ 27ಕ್ಕೆ 2). ನೇಪಾಳ: 19.3 ಓವರ್‌ಗಳಲ್ಲಿ 120 (ಕುಶಾಲ್ ಮಲ್ಲ 37; ದಿಲೋನ್ ಹ್ಯಾಲಿಗರ್ 20ಕ್ಕೆ4, ಜೆರೆಮಿ ಗಾರ್ಡನ್ 25ಕ್ಕೆ 2) ಫಲಿತಾಂಶ: ಕೆನಡಾಕ್ಕೆ 63 ರನ್‌ಗಳ ಜಯ

ಪಾಪುವಾ ನ್ಯೂಗಿನಿ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 137 (ಲೆಗಾ ಸಿಯಾಕಾ 28, ಅಕೀಬ್ ಇಲ್ಯಾಸ್ 22ಕ್ಕೆ 3 ಬಿಲಾಲ್ ಖಾನ್ 20ಕ್ಕೆ 2). ಒಮನ್‌: 19.1 ಓವರ್‌ಗಳಲ್ಲಿ 7 ವಿಕೆಟ್‌ಗೆ 141 (ಝೀಶನ್ ಮಕ್ಸೂದ್ 45, ಅಲೀ ನಾವೊ 12ಕ್ಕೆ 2, ಚಾರ್ಲ್ಸ್ ಅಮಿನಿ 19ಕ್ಕೆ 2). ಫಲಿತಾಂಶ: ಒಮನ್‌ ತಂಡಕ್ಕೆ ಮೂರು ವಿಕೆಟ್‌ ಜಯ

ಉಗಾಂಡ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 134 (ರೋಜರ್ ಮುಕಾಸಾ ಔಟಾಗದೇ 51, ರಾಬಿನ್ಸನ್ ಒಬುಯಾ ಔಟಾಗದೆ 38; ಬರ್ನಾರ್ಡ್ ಸ್ಕೋಲ್ಟ್‌ಜ್ 16ಕ್ಕೆ 2, ಮೆರ್ವೆ ಎರಾಸ್ಮಸ್ 24ಕ್ಕೆ 2). ನಮೀಬಿಯಾ: 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 135 (ನಿಕೊ ಡೇವಿನ್ 54; ಹೆನ್ರಿ ಸೆನ್ಯೊಂಡೋ 14ಕ್ಕೆ 2). ಫಲಿತಾಂಶ: ನಮೀಬಿಯಾ ತಂಡಕ್ಕೆ 5 ವಿಕೆಟ್‌ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT