ಮಂಗಳವಾರ, ಮಾರ್ಚ್ 21, 2023
25 °C
ಬಾಬಾ ಅಪರಾಜಿತ್, ಶೆಲ್ಡನ್ ಶತಕ

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಫೈನಲ್‌ಗೆ ತಮಿಳುನಾಡು, ಹಿಮಾಚಲಪ್ರದೇಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೈಪುರ: ತಮಿಳುನಾಡು ಮತ್ತು ಹಿಮಾಚಲ ಪ್ರದೇಶ ತಂಡಗಳು ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. 

ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ತಮಿಳುನಾಡು ತಂಡವು ಸೌರಾಷ್ಟ್ರದ ವಿರುದ್ಧ 2 ವಿಕೆಟ್‌ಗಳಿಂದ ಜಯಿಸಿತು. ಹಿಮಾಚಲ ಪ್ರದೇಶ ತಂಡವು 77 ರನ್‌ಗಳಿಂದ ಸರ್ವಿಸಸ್ ವಿರುದ್ಧ ಗೆದ್ದಿತು. 

ಕೆ.ಎಲ್. ಸೈನಿ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ರನ್‌ಗಳ ಹೊಳೆ ಹರಿಯಿತು. ಮೊದಲು ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ ತಂಡವು ಶೆಲ್ಡನ್ ಜಾಕ್ಸನ್ (134; 125ಎ,4X11, 6X4 ) ಶತಕ ಮತ್ತು ವಿಶ್ವರಾಜ್ ಜಡೇಜ (52; 74ಎ,4X6, 6X1) ಅರ್ಧಶತಕದ ಬಲದಿಂದ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 310 ರನ್ ಗಳಿಸಿತು.

ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ತಮಿಳುನಾಡು ತಂಡಕ್ಕೆ ಬಾಬಾ ಅಪರಾಜಿತ್ (122; 124ಎ, 4X12, 6X3), ಬಾಬಾ ಇಂದ್ರಜೀತ್ (50; 58ಎ, 4X5, 6X1) ಮತ್ತು ವಾಷಿಂಗ್ಟನ್ ಸುಂದರ್ (70; 61ಎ, 4X8) ಗೆಲುವಿನ ಕಾಣಿಕೆ ನೀಡಿದರು. ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 314 ರನ್‌ ಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಸೌರಾಷ್ಟ್ರ ತಂಡದ ಮಧ್ಯಮವೇಗಿ ಚೇತನ್ ಸಕಾರಿಯಾ (62ಕ್ಕೆ5) ಉತ್ತಮ ಬೌಲಿಂಗ್ ಮಾಡಿದರು.

ರಿಷಿ ಧವನ್ ಆಲ್‌ರೌಂಡ್ ಆಟ: ನಾಯಕ ರಿಷಿ ಧವನ್ (84 ಮತ್ತು 27ಕ್ಕೆ4) ಅವರ ಆಲ್‌ರೌಂಡ್ ಆಟದ ಬಲದಿಂದ ಹಿಮಾಚಲ ಪ್ರದೇಶ ತಂಡವು ಸರ್ವಿಸಸ್ ವಿರುದ್ಧ ಗೆದ್ದಿತು. 

ಪ್ರಶಾಂತ್ ಚೋಪ್ರಾ (78; 109ಎ) ಮತ್ತು ರಿಷಿ ಬ್ಯಾಟಿಂಗ್ ಬಲದಿಂದ ಹಿಮಾಚಲ ತಂಡವು 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 281 ರನ್ ಗಳಿಸಿತು. 

ಗುರಿ ಬೆನ್ನಟ್ಟಿದ ಸರ್ವಿಸಸ್ ತಂಡವು 46.1 ಓವರ್‌ಗಳಲ್ಲಿ 204 ರನ್ ಗಳಿಸಿ ಆಲೌಟ್ ಆಯಿತು.  

ಸಂಕ್ಷಿಪ್ತ ಸ್ಕೋರು
ಕೆ.ಎಲ್. ಸೈನಿ ಕ್ರೀಡಾಂಗಣ: ಸೌರಾಷ್ಟ್ರ: 50 ಓವರ್‌ಗಳಲ್ಲಿ 8ಕ್ಕೆ 310
(ವಿಶ್ವರಾಜ್ ಜಡೇಜ 52, ಶೆಲ್ಡನ್ ಜಾಕ್ಸನ್ 134, ಪ್ರೇರಕ್ ಮಂಕಡ್ 37, ಅರ್ಪಿತ್ ವಾಸವದಾ 57,  ಸಿಲಂಬರಸನ್ 54ಕ್ಕೆ3, ವಿಜಯಶಂಕರ್ 72ಕ್ಕೆ4)
 ತಮಿಳುನಾಡು: 50 ಓವರ್‌ಗಳಲ್ಲಿ 8ಕ್ಕೆ 314 (ಬಾಬಾ ಅಪರಾಜಿತ್ 122, ಬಾಬಾ ಇಂದ್ರಜೀತ್ 50, ದಿನೇಶ್ ಕಾರ್ತಿಕ್ 31, ವಾಷಿಂಗ್ಟನ್ ಸುಂದರ್ 70, ಚೇತನ್ ಸಕಾರಿಯಾ 62ಕ್ಕೆ5, ಯುವರಾಜ್ ಚುಡಾಸಮಾ 69ಕ್ಕೆ2)
ಫಲಿತಾಂಶ: ತಮಿಳುನಾಡು ತಂಡಕ್ಕೆ 2 ವಿಕೆಟ್‌ಗಳ ಜಯ. 

ಸವಾಯಿ ಮಾನಸಿಂಗ್ ಕ್ರೀಡಾಂಗಣ: ಹಿಮಾಚಲಪ್ರದೇಶ: 50 ಓವರ್‌ಗಳಲ್ಲಿ 6ಕ್ಕೆ 281 (ಪ್ರಶಾಂತ್ ಚೋಪ್ರಾ 78, ದಿಗ್ವಿಜಯ್ ರಂಗಿ 37, ರಿಷಿ ಧವನ್ 84, ಆಕಾಶ್ ವಸಿಷ್ಠ ಔಟಾಗದೆ 45, ರಾಜ್ ಬಹಾದೂರ್ 52ಕ್ಕ2)
ಸರ್ವಿಸಸ್: 46.1 ಓವರ್‌ಗಳಲ್ಲಿ 204 (ರವಿ ಚೌಹಾಣ್ 45, ರಜತ್ ಪಲಿವಾಲಾ 55, ದೇವೆಂದರ್ ಲೊಹಚಾಬ್ 34, ರಿಷಿ ಧವನ್ 27ಕ್ಕೆ4, ಸಿದ್ಧಾರ್ಥ್ ಶರ್ಮಾ 34ಕ್ಕೆ2, ಆಕಾಶ್ ವಸಿಷ್ಠ 28ಕ್ಕೆ2)
ಫಲಿತಾಂಶ: ಹಿಮಾಚಲಪ್ರದೇಶ ತಂಡಕ್ಕೆ 77 ರನ್ ಜಯ.

ಫೈನಲ್: ತಮಿಳುನಾಡು–ಹಿಮಾಚಲಪ್ರದೇಶ
ಸವಾಯಿ ಮಾನಸಿಂಗ್ ಕ್ರೀಡಾಂಗಣ (ಡಿ. 26)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು