ಬೆಂಗಳೂರು: ಇತ್ತೀಚೆಗೆ ಮುಕ್ತಾಯವಾದ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಬಳಗವನ್ನು 4 ವಿಕೆಟ್ ಅಂತರದಿಂದ ಮಣಿಸುವ ಮೂಲಕ 12 ವರ್ಷಗಳ ನಂತರ ಈ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.

ಈ ಐತಿಹಾಸಿಕ ಜಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಆಟಗಾರರೂ, ವಿವಿಧ ವೇದಿಕೆಗಳಲ್ಲಿ ಹಲವು ಪೋಸ್ಟ್ಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಆದರೆ, ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಈ ಕುರಿತ ಒಂದೇ ಒಂದು ಪೋಸ್ಟ್ ಅನ್ನು ಹಂಚಿಕೊಂಡಿಲ್ಲ. ಇದು ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದ್ದು, ಭಾರೀ ಚರ್ಚೆ ಹುಟ್ಟುಹಾಕಿತ್ತು.

ಇದೀಗ, ತಾವು ಯಾವ ಪೋಸ್ಟನ್ನೂ ಹಂಚಿಕೊಳ್ಳದಿರುವುದೇಕೆ ಎಂದುದನ್ನು ಸ್ವತಃ ಕೊಹ್ಲಿಯೇ ಹೇಳಿದ್ದಾರೆ.

'ನಾವು ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದೇವೆ ಎಂಬ ಪೋಸ್ಟ್ ಹಂಚಿಕೊಳ್ಳುವುದರಿಂದ ನಮ್ಮ ಹೃದಯದಲ್ಲಿ ಸಂಭ್ರಮ ಹೆಚ್ಚಾಗುವುದಿಲ್ಲ. ನಾವು ಟ್ರೋಫಿ ಗೆದ್ದಿದ್ದೇವೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ, ಅದನ್ನು ಹಂಚಿಕೊಳ್ಳುವುದರಿಂದ ನಮಗೆ ಎರಡು ಟ್ರೋಫಿ ಸಿಗುವುದಿಲ್ಲ. ವಾಸ್ತವ ಬದಲಾಗುವುದಿಲ್ಲ ಮತ್ತು ನಾನದನ್ನು ಹಾಗೆಯೇ ನೋಡುತ್ತೇನೆ' ಎಂದಿದ್ದಾರೆ.
.ಒಬ್ಬಂಟಿಯಾಗಿ ಬೇಸರಪಡಲು ಬಯಸುವುದಿಲ್ಲ: ಫ್ಯಾಮಿಲಿ ಪರ ಕೊಹ್ಲಿ ಬ್ಯಾಟಿಂಗ್.WPL-2025: ಈ ಋತುವಿನಲ್ಲಿ 500; ಡಬ್ಲ್ಯುಪಿಎಲ್ನಲ್ಲಿ 1000 ರನ್ ಪೂರೈಸಿದ ಬ್ರಂಟ್.
ವಿರಾಟ್ ಕೊಹ್ಲಿ ಅವರು ತಮ್ಮ ಖಾತೆಗಳಲ್ಲಿ ಪ್ರಾಯೋಜಕತ್ವ ಫೋಸ್ಟ್ಗಳನ್ನಷ್ಟೇ ಹಂಚಿಕೊಳ್ಳುತ್ತಾರೆ. ಅವರು ಪ್ರಾಯೋಜಕತ್ವಕ್ಕೆ ಸಂಬಂಧಿಸಿದ್ದಲ್ಲದ ಕೊನೇ ಪೋಸ್ಟ್ ಹಂಚಿಕೊಂಡಿದ್ದು, 2024ರ ಜೂನ್ 4ರಂದು. ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಗೆದ್ದಾಗ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿದಾಗಿನ ಚಿತ್ರಗಳು ಅವಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.