ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

IND vs NZ 2nd T20| ಗೆಲುವಿನ ಒತ್ತಡದಲ್ಲಿ ಹಾರ್ದಿಕ್ ಬಳಗ

ಲಖನೌನಲ್ಲಿ ಭಾರತ–ನ್ಯೂಜಿಲೆಂಡ್ ಮುಖಾಮುಖಿ ಇಂದು; ಮೊದಲ ಪಂದ್ಯದಲ್ಲಿ ಗೆದ್ದಿರುವ ಕಿವೀಸ್ ಬಳಗ
Last Updated 28 ಜನವರಿ 2023, 20:15 IST
ಅಕ್ಷರ ಗಾತ್ರ

ಲಖನೌ: ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡವು ನ್ಯೂಜಿಲೆಂಡ್ ಎದುರಿನ ಚುಟುಕು ಕ್ರಿಕೆಟ್ ಸರಣಿ ಜಯಿಸುವ ಗುರಿ ಈಡೇರಬೇಕಾದರೆ ಭಾನುವಾರ ನಡೆಯುವ ಪಂದ್ಯದಲ್ಲಿ ಗೆಲ್ಲಲೇಬೇಕು.

ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ಈಗ 1–0ಯ ಮುನ್ನಡೆಯಲ್ಲಿದೆ. ರಾಂಚಿಯಲ್ಲಿ ಶುಕ್ರವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಆತಿಥೇಯ ತಂಡವು 21 ರನ್‌ಗಳಿಂದ ಸೋತಿತ್ತು.

ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದ ಪಿಚ್‌ನಲ್ಲಿ ವೇಗಿಗಳಾದ ಉಮ್ರಾನ್ ಮಲಿಕ್ ಮತ್ತು ಆರ್ಷದೀಪ್ ಸಿಂಗ್ ದುಬಾರಿಯಾದರು. ಕಿವೀಸ್ ಆಟಗಾರ ಡೆವೊನ್ ಕಾನ್ವೆ ಆರಂಭಿಕ ಹಂತದ ಓವರ್‌ಗಳಲ್ಲಿ ಮತ್ತು ಡೆರಿಲ್ ಮಿಚೆಲ್ ಕೊನೆಯ ಹಂತದ ಓವರ್‌ಗಳಲ್ಲಿ ಅಬ್ಬರಿಸಿ ಸವಾಲಿನ ಮೊತ್ತ ಪೇರಿಸಿದರು. ಆದರೆ ಭಾರತದ ಅಗ್ರಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದು ಸೋಲಿಗೆ ಮುಖ್ಯ ಕಾರಣವಾಯಿತು.

ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಚೆಂದದ ಬ್ಯಾಟಿಂಗ್‌ ನೋಡುಗರ ಮನಸೆಳೆಯಿತು. ಆದರೆ, ತಂಡ ಜಯಿಸಲಿಲ್ಲ.

ಎರಡನೇ ಪಂದ್ಯದಲ್ಲಿ ಈ ಲೋಪಗಳು ಮರುಕಳಿಸಿದರೆ ಸರಣಿ ಜಯದ ಆಸೆ ಕಮರುವುದು ಖಚಿತ. ಫೀಲ್ಡಿಂಗ್‌ನಲ್ಲಿ ಚುರುಕಾಗಿರುವ ಕಿವೀಸ್‌ ರನ್‌ಗಳಿಗೆ ತಡೆಯೊಡ್ಡಬಲ್ಲದು. ಏಕದಿನ ಕ್ರಿಕೆಟ್‌ನ ದ್ವಿಶತಕ ಸಾಧಕರಾದ ಶುಭಮನ್ ಮತ್ತು ಇಶಾನ್ ಇಲ್ಲಿ ಉತ್ತಮ ಆರಂಭ ನೀಡಿದರೆ ನಂತರದ ಬ್ಯಾಟರ್‌ಗಳಿಗೆ ಕೆಲಸ ಸುಲಭವಾಗುತ್ತದೆ.

ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಕೂಡ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವ ನಿರೀಕ್ಷೆ ಇದೆ.

ತಂಡಗಳು

ಭಾರತ: ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್‌ಕೀಪರ್), ಶುಭಮನ್ ಗಿಲ್, ಪೃಥ್ವಿಶಾ, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಆರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್, ಜಿತೇಶ್ ಶರ್ಮಾ (ವಿಕೆಟ್‌ಕೀಪರ್).

ನ್ಯೂಜಿಲೆಂಡ್: ಮಿಚೆಲ್ ಸ್ಯಾಂಟನರ್ (ನಾಯಕ), ಫಿನ್ ಅಲೆನ್, ಡೆವೊನ್ ಕಾನ್ವೆ (ವಿಕೆಟ್‌ಕೀಪರ್), ಗ್ಲೆನ್ ಫಿಲಿಪ್ಸ್, ಡೇನ್ ಕ್ಲೀವರ್ (ವಿಕೆಟ್‌ಕೀಪರ್), ಮಾರ್ಕ್ ಚಾಪ್ಮನ್, ಮೈಕಲ್ ಬ್ರೇಸ್‌ವೆಲ್, ಡೆರಿಲ್ ಮಿಚೆಲ್, ಮಿಚೆಲ್ ರಿಪನ್, ಲಾಕಿ ಫರ್ಗ್ಯುಸನ್, ಈಶ್ ಸೋಧಿ, ಬ್ಲೇರ್ ಟಿಕ್ನರ್, ಜೇಕಬ್ ಡಫಿ, ಹೆನ್ರಿ ಶಿಪ್ಲಿ, ಬೆನ್ ಲಿಸ್ಟರ್.

ಪಂದ್ಯ ಆರಂಭ: ರಾತ್ರಿ 7.

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT