IPL 2022: ಗುಜರಾತ್ ಟೈಟನ್ಸ್ ತಂಡ ಸೇರಲಿರುವ ‘ಮಿಸ್ಟರ್ ಐಪಿಎಲ್’ ಸುರೇಶ್ ರೈನಾ?

ನವದೆಹಲಿ: ಇತ್ತೀಚಿಗಷ್ಟೇ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ –2022 (ಐಪಿಎಲ್) ಟಿ–20 ಕ್ರಿಕೆಟ್ನ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಬಿಕರಿಯಾಗದೆ ಉಳಿದಿದ್ದ ಭಾರತದ ಸುರೇಶ್ ರೈನಾ ಅವರನ್ನು ಖರೀದಿಸಲು ಗುಜರಾತ್ ಟೈಟನ್ಸ್ ಮುಂದಾಗಿದೆ ಎಂದು ವರದಿಯಾಗಿದೆ.
ಗುಜರಾತ್ ಟೈಟನ್ಸ್ ಪರ ಕಣಕ್ಕಿಳಿಯಬೇಕಿದ್ದ ಇಂಗ್ಲೆಂಡ್ ತಂಡದ ಬ್ಯಾಟರ್ ಜೇಸನ್ ರಾಯ್ ಅವರು ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವುದಾಗಿ ಪ್ರಕಟಿಸಿದ್ದಾರೆ. ಹಾಗಾಗಿ ಅವರ ಬದಲಿಗೆ ಸುರೇಶ್ ರೈನಾ ಅವರನ್ನು ಖರೀದಿಸುವಂತೆ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ.
'ಮಿಸ್ಟರ್ ಐಪಿಎಲ್' ಎಂದೇ ಹೆಸರಾಗಿದ್ದ ರೈನಾ ಅವರಿಗೆ ಮೂಲ ಬೆಲೆ ₹2 ಕೋಟಿ ನಿಗದಿಯಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಲ್ಕು ಬಾರಿ ಚಾಂಪಿಯನ್ ಆಗುವಲ್ಲಿ ಸುರೇಶ್ ರೈನಾ ಪಾತ್ರ ಪ್ರಮುಖವಾಗಿತ್ತು. ಐಪಿಎಲ್ ಟೂರ್ನಿಯಲ್ಲಿ ಅವರು ಈವರೆಗೂ 5,528 ರನ್ ಗಳಿಸಿದ್ದಾರೆ.
ಓದಿ... IPL 2022: ತಂಡಗಳ ವಿಂಗಡನೆ, ಆರ್ಸಿಬಿ ಆಡಲಿರುವ ಪಂದ್ಯಗಳ ಮಾಹಿತಿ ಇಲ್ಲಿದೆ!
2008ರಿಂದ 2021ರ ವರೆಗೂ ಐಪಿಎಲ್ ಹರಾಜಿನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಆಟಗಾರರ ಪೈಕಿ ನಾಲ್ಕನೇ ಸ್ಥಾನದಲ್ಲಿರುವ ಸುರೇಶ್ ರೈನಾ ( ಒಟ್ಟು ₹110.7 ಕೋಟಿ) ಅವರನ್ನು ಈ ಬಾರಿ ಯಾವುದೇ ತಂಡ ಆಯ್ಕೆ ಮಾಡಿಲ್ಲ. ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ರೈನಾ ಬಿಕರಿಯಾಗದೆ ಉಳಿದಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ 2020ರ ಐಪಿಎಲ್ನಿಂದ ರೈನಾ ಮನೆಗೆ ಮರಳಿದ್ದರು. 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೆ ಸೇರ್ಪಡೆಯಾಗಿದ್ದ ಅವರು ಕೇವಲ 160 ರನ್ ಗಳಿಸಿದ್ದರು. ಬ್ಯಾಟಿಂಗ್ ಸರಾಸರಿ 17.77 ದಾಖಲಾಗಿತ್ತು.
ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಸುರೇಶ್ ರೈನಾ, ಸ್ಟೀವ್ ಸ್ಮಿತ್, ಶಕೀಬ್ ಅಲ್ ಹಸನ್, ಇಮ್ರಾನ್ ತಾಹೀರ್, ಆ್ಯಡಂ ಜಂಪಾ, ಆ್ಯರನ್ ಫಿಂಚ್, ಡೇವಿಡ್ ಮಿಲಾನ್, ಉಸ್ಮಾನ್ ಖ್ವಾಜಾ, ಕೇದಾರ್ ಜಾಧವ್, ಮಾರ್ಟಿನ್ ಗಪ್ಟಿಲ್, ಕಾರ್ಲೊಸ್ ಬ್ರೇಥ್ವೇಟ್, ಚೇತೇಶ್ವರ್ ಪೂಜಾರ, ಮುರಳಿ ವಿಜಯ್ ಸೇರಿದಂತೆ ಪ್ರಮುಖ ಆಟಗಾರರು ಮಾರಾಟವಾಗದೆ ಉಳಿದಿದ್ದಾರೆ.
ಓದಿ... IPL 2022 Mega Auction: ಹರಾಜಿನ ಬಳಿಕ ಎಲ್ಲ ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ
Jason Roy - Out ❎
Suresh Raina - In ☑️I know Suresh Raina is not playing any competitive or domestic match now but he is a player who can do a strong comeback any time.#sureshraina #raina #jasonroy #GujaratTitans #IPL2022 pic.twitter.com/wDnaQNzCdv
— Devendra Kumar Mahto (@Devendr44246318) March 1, 2022
Jason Roy ♋️ Suresh Raina.
A better choice ❤️
Brings him back! @gujarat_titans @ImRaina pic.twitter.com/yuleYXyfaC— Prawin Singh Yaadav 🇳🇵 (@YaadavPrawin) March 2, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.