ಬೆಂಗಳೂರು: ತಮಿಳುನಾಡಿನ ಬ್ಯಾಟರ್ ನಾರಾಯಣ ಜಗದೀಶನ್ ಅವರು ‘ಲಿಸ್ಟ್ ಎ’ ಕ್ರಿಕೆಟ್ ಪಂದ್ಯದಲ್ಲಿ ಅತ್ಯಧಿಕ ರನ್ ಗಳಿಸಿ ವಿಶ್ವದಾಖಲೆ ಮಾಡಿದರು.

ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಅವರು 141 ಎಸೆತಗಳಲ್ಲಿ 277 ರನ್ (25 ಸಿಕ್ಸರ್, 15 ಬೌಂಡರಿ) ಕಲೆಹಾಕಿದರು. ನಿಗದಿತ ಓವರ್‌ಗಳ (ಲಿಸ್ಟ್ ಎ) ಪಂದ್ಯದಲ್ಲಿ ಬ್ಯಾಟರ್‌ವೊಬ್ಬ ಗಳಿಸಿದ ಅತ್ಯಧಿಕ ಮೊತ್ತ ಇದಾಗಿದೆ.

ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ 2002ರಲ್ಲಿ ನಡೆದಿದ್ದ ಪಂದ್ಯದಲ್ಲಿ ಸರೆ ತಂಡದ ಆಲಿಸ್ಟರ್ ಬ್ರೌನ್ ಅವರು ಗ್ಲಮಾರ್ಗನ್ ವಿರುದ್ಧ 268 ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಭಾರತದ ಬ್ಯಾಟರ್‌ಗಳಲ್ಲಿ ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಶ್ರೀಲಂಕಾ ವಿರುದ್ಧದ ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಅವರು 264 ರನ್ ಗಳಿಸಿದ್ದರು.

ತಮಿಳುನಾಡು –ಅರುಣಾಚಲ ಪ್ರದೇಶ ಪಂದ್ಯ ಇನ್ನೂ ಹಲವು ದಾಖಲೆಗಳಿಗೆ ಸಾಕ್ಷಿಯಾದವು.

ದಾಖಲೆ ಅಂತರದ ಗೆಲುವು: ಮೊದಲು ಬ್ಯಾಟ್ ಮಾಡಿದ ತಮಿಳುನಾಡು 50 ಓವರ್‌ಗಳಲ್ಲಿ 2 ವಿಕೆಟ್‌ಗೆ 506 ರನ್ ಗಳಿಸಿತು. ಇದು ತಂಡವೊಂದರ ಗರಿಷ್ಠ ಮೊತ್ತ ಆಗಿದೆ. ಅರುಣಾಚಲ ಪ್ರದೇಶ 28.4 ಓವರ್‌ಗಳಲ್ಲಿ 71 ರನ್‌ಗಳಿಗೆ ಆಲೌಟಾಯಿತು. 435 ರನ್‌ಗಳಿಂದ ಗೆದ್ದ ತಮಿಳುನಾಡು, ಅತಿದೊಡ್ಡ ಗೆಲುವಿನ ವಿಶ್ವದಾಖಲೆ ಮಾಡಿತು. 1990ರಲ್ಲಿ ನಡೆದಿದ್ದ ಪಂದ್ಯದಲ್ಲಿ ಸಮರ್ಸೆಟ್ 346 ರನ್‌ಗಳಿಂದ ಡೆವೊನ್ ತಂಡವನ್ನು ಮಣಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.