ಸೋಮವಾರ, ನವೆಂಬರ್ 28, 2022
20 °C

T20 World Cup: ಚುಟುಕು ಕ್ರಿಕೆಟ್‌ನಲ್ಲಿ 4 ಸಾವಿರ ಪೂರೈಸಿದ ಏಕೈಕ ಆಟಗಾರ ಕೊಹ್ಲಿ

ಪ್ರಜಾವಾಣಿ ವೆಬ್ ಡಸ್ಕ್ Updated:

ಅಕ್ಷರ ಗಾತ್ರ : | |

ಅಡಿಲೇಡ್‌: ಭಾರತ ಕ್ರಿಕೆಟ್‌ ತಂಡದ ರನ್‌ ಮಷಿನ್‌ ಹಾಗೂ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ ಮಾದರಿಯಲ್ಲಿ ನಾಲ್ಕು ಸಾವಿರ ರನ್‌ ಪೂರೈಸಿದ ವಿಶ್ವದ ಏಕೈಕ ಬ್ಯಾಟರ್‌ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 43 ರನ್‌ ಗಳಿಸಿದ್ದಾಗ ಅವರು ಈ ಸಾಧನೆ ಮಾಡಿದರು.

ಚುಟುಕು ಮಾದರಿಯಲ್ಲಿ ಇದುವರೆಗೆ 115 ಪಂದ್ಯಗಳ 107 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಕೊಹ್ಲಿ, ಬರೋಬ್ಬರಿ 4,008 ರನ್‌ ಗಳಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ಅವರ ಖಾತೆಯಲ್ಲಿ 4,958 ರನ್‌ ಗಳಿದ್ದವು.

ಭಾರತಕ್ಕೆ ಸೋಲು; ಇಂಗ್ಲೆಂಡ್‌ ಫೈನಲ್‌ಗೆ
ಇಂದು (ನವೆಂಬರ್‌ 10 ರಂದು) ಅಡಿಲೇಡ್‌ನ ಓವಲ್‌ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 169 ರನ್ ಗಳಿಸಿತ್ತು. ವಿರಾಟ್‌ ಕೊಹ್ಲಿ (50) ಹಾಗೂ ಹಾರ್ದಿಕ್‌ ಪಾಂಡ್ಯ (63) ಅರ್ಧಶತಕ ಸಿಡಿಸಿ ನೆರವಾಗಿದ್ದರು.

ಈ ಮೊತ್ತ ಬೆನ್ನತ್ತಿದ ಇಂಗ್ಲೆಂಡ್‌ ಒಂದೂ ವಿಕೆಟ್‌ ಕಳೆದುಕೊಳ್ಳದೆ ಜಯದ ನಗೆ ಬೀರಿತು. ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಅಲೆಕ್ಸ್‌ ಹೇಲ್ಸ್‌ ಮತ್ತು ಜಾಸ್‌ ಬಟ್ಲರ್‌ ಜೋಡಿ ಮುರಿಯದ ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 170 ರನ್‌ ಕಲೆಹಾಕಿತು.

ಇದನ್ನೂ ಓದಿ: 

ಹೇಲ್ಸ್‌ ಕೇವಲ 47 ಎಸೆತಗಳಲ್ಲಿ 7 ಸಿಕ್ಸರ್‌ ಮತ್ತು 4 ಬೌಂಡರಿ ಸಹಿತ 89 ರನ್‌ ಚಚ್ಚಿದರೆ, ಅವರಿಗೆ ಉತ್ತಮ ಬೆಂಬಲ ನೀಡಿದ ಬಟ್ಲರ್‌ 49 ಎಸೆತಗಳಲ್ಲಿ 3 ಸಿಕ್ಸರ್‌ ಮತ್ತು 9 ಬೌಂಡರಿ ಸಹಿತ 80 ರನ್‌ ಸಿಡಿಸಿದರು. ಹೀಗಾಗಿ ಇನ್ನೂ ನಾಲ್ಕು ಓವರ್‌ ಬಾಕಿ ಇರುವಂತೆಯೇ ಇಂಗ್ಲೆಂಡ್‌ ಜಯ ಸಾಧಿಸಿತು. ಇದರೊಂದಿಗೆ ನವೆಂಬರ್‌ 13ರಂದು ಪಾಕಿಸ್ತಾನ ವಿರುದ್ಧ ಮೆಲ್ಬರ್ನ್‌ನಲ್ಲಿ ನಡೆಯುವ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದ ಐವರು

ಆಟಗಾರದೇಶಪಂದ್ಯಇನಿಂಗ್ಸ್‌ರನ್
ವಿರಾಟ್‌ ಕೊಹ್ಲಿಭಾರತ1151074,008
ರೋಹಿತ್ ಶರ್ಮಾಭಾರತ1481403,853
ಮಾರ್ಟಿನ್‌ ಗಪ್ಟಿಲ್‌ನ್ಯೂಜಿಲೆಂಡ್‌1221183,531
ಬಾಬರ್ ಅಜಂಪಾಕಿಸ್ತಾನ98933,323
ಪೌಲ್‌ ಸ್ಟರ್ಲಿಂಗ್ಐರ್ಲೆಂಡ್‌1211203,181

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು