ಚಂಡೀಗಡ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೈನಲ್ಗೇರಿದ ಸಾಧನೆ ಮಾಡಿದೆ.

ಗುರುವಾರ ಚಂಡೀಗಡದಲ್ಲಿ ನಡೆದ ಮೊದಲ ಕ್ವಾಲಿಫೈಯರ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಎಂಟು ವಿಕೆಟ್ ಅಂತರದ ಗೆಲುವು ಸಾಧಿಸಿರುವ ಆರ್ಸಿಬಿ, ಫೈನಲ್ಗೆ ಪ್ರವೇಶಿಸಿದೆ.

ಈ ಪಂದ್ಯದ ಗೆಲುವಿನ ಬಳಿಕ ಆರ್ಸಿಬಿ ಆಟಗಾರರು ಸಂಭ್ರಮದ ಅಲೆಯಲ್ಲಿ ತೇಲಾಡಿದ್ದಾರೆ. ಈ ಸಂದರ್ಭದಲ್ಲಿ ಆರ್ಸಿಬಿ ತಾರೆ ವಿರಾಟ್ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾಗೆ ಮಾಡಿದ ಸನ್ನೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ.

'ಪ್ರಶಸ್ತಿಗೆ ಇನ್ನೊಂದೇ ಹೆಜ್ಜೆ' ಎಂದು ವಿರಾಟ್ ಸನ್ನೆ ಮಾಡಿದ್ದಾರೆ. ಪ್ರಸ್ತುತ ವಿಡಿಯೊವನ್ನು ಐಪಿಎಲ್ ಹಾಗೂ ಆರ್ಸಿಬಿಯ ಅಧಿಕೃತ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ.

ಐಪಿಎಲ್ನಲ್ಲಿ ಆರ್ಸಿಬಿ ಇದುವರೆಗೆ ಟ್ರೋಫಿ ಗೆದ್ದಿಲ್ಲ. ಆದರೆ ನಾಲ್ಕನೇ ಸಲಫೈನಲ್ಗೇರಿದ ಸಾಧನೆ ಮಾಡಿದೆ. ಈ ಹಿಂದೆ 2009, 2011 ಹಾಗೂ 2016ನೇ ಸಾಲಿನಲ್ಲೂ ಫೈನಲ್ಗೆ ಪ್ರವೇಶಿಸಿತ್ತು. ಆದರೆ ಮೂರು ಬಾರಿಯೂ ರನ್ನರ್ ಅಪ್ ಆಗಿತ್ತು.

ಮತ್ತೊಂದೆಡೆ ಕಳೆದ 18 ವರ್ಷಗಳಲ್ಲಿ ಆರ್ಸಿಬಿ ತಂಡವನ್ನು ಪ್ರತಿನಿಧಿಸುತ್ತಿರುವ ವಿರಾಟ್ ಕೊಹ್ಲಿ ಈ ಸಲ ಟ್ರೋಫಿಯ ಸನಿಹದಲ್ಲಿದ್ದಾರೆ. ಅಲ್ಲದೆ ಈ ಬಾರಿ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ ಎಂಬುದು ಅಭಿಮಾನಿಗಳ ಹಾರೈಕೆಯಾಗಿದೆ.
.RCB Final | 4ನೇ ಬಾರಿ ಫೈನಲ್ಗೆ ಲಗ್ಗೆ; ಪ್ರಶಸ್ತಿಗೆ ಇನ್ನು ಒಂದೇ ಮೆಟ್ಟಿಲು.ಯಶ್, ಜೋಶ್, ಸುಯಶ್ ತಂದ ಯಶಸ್ಸು: RCB ಕಿರೀಟಧಾರಣೆಗೆ ಇನ್ನೊಂದೇ ಹೆಜ್ಜೆ ಬಾಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.