ಗುರುವಾರ , ಏಪ್ರಿಲ್ 2, 2020
19 °C

ಕೊಹ್ಲಿ ಅಥವಾ ಎಬಿಡಿ | ಈ ಇಬ್ಬರಲ್ಲಿ ಬ್ರಾಡ್ ಹಾಗ್ ನೆಚ್ಚಿನ ಆಟಗಾರ ಯಾರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್‌ ಅವರು ಸ್ಫೋಟಕ ಬ್ಯಾಟಿಂಗ್‌ ಮೂಲಕ ರಂಜಿಸಿದರೆ, ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಕಲಾತ್ಮಕ ಹೊಡೆತ ಮತ್ತು ಆಕ್ರಮಣಕಾರಿ ಶೈಲಿಯಿಂದ ಗಮನ ಸೆಳೆಯುತ್ತಾರೆ. ಸದ್ಯ ಈ ಇಬ್ಬರೂ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಭಾಗವಾಗಿದ್ದಾರೆ.

ಕ್ಷೇತ್ರರಕ್ಷಣೆಯಲ್ಲಿಯೂ ಮಿಂಚಿನ ‌ಆಟವಾಡುವ ಈ ಇಬ್ಬರಲ್ಲಿ ಕ್ರಿಕೆಟ್‌ ದಿಗ್ಗಜರು ಯಾರನ್ನು ಇಷ್ಟಪಡುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ. ಹಾಗಾಗಿ ಈ ಕುರಿತು ಅಭಿಮಾನಿಯೊಬ್ಬರು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಬ್ರಾಡ್‌ ಹಾಗ್‌ ಮತ್ತು ಟಾಮ್‌ ಮೂಡಿಯವರನ್ನು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದರು.

ರಾಘವ್‌ ಅಗರ್ವಾಲ್‌ ಎನ್ನುವವರು, ‘ನಿವೃತ್ತಿಯ ನಂತರವೂ ಎಬಿ ಡಿ ವಿಲಿಯರ್ಸ್‌ ಅಮೋಘ ಫಾರ್ಮ್‌ನಲ್ಲಿದ್ದಾರೆ. ವಿರಾಟ್‌ ಕೊಹ್ಲಿಯೂ ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಾರೆ. ನಿಮ್ಮ ಪ್ರಕಾರ ಎಬಿ ಡಿ ಮತ್ತು ಕೊಹ್ಲಿ ಇಬ್ಬರಲ್ಲಿ ಯಾರು ಶ್ರೇಷ್ಠ ಬ್ಯಾಟ್ಸ್‌ಮನ್‌’ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಹಾಗ್‌, ‘ಕೊಹ್ಲಿ’ ಎಂದು ಉತ್ತರಿಸಿದ್ದಾರೆ. ಆ ಮಾತನ್ನು ಅಂಕಿಅಂಶಗಳೇ ಬೆಂಬಲಿಸುತ್ತವೆ ಎಂದೂ ಹೇಳಿದ್ದಾರೆ.

ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಸಾಧನೆ

–– ಪಂದ್ಯ ಇನಿಂಗ್ಸ್‌ ರನ್ ಶತಕ ಅರ್ಧಶತಕ ದ್ವಿಶತಕ ಗರಿಷ್ಠ
ಟೆಸ್ಟ್‌ 86 145 7240 27 22 7 254
ಏಕದಿನ 248 239 11867 43 58 183
ಟಿ20 81 76 2794 24 94
ಐಪಿಎಲ್‌ 177 169 5412 5 36 113

ಎಬಿ ಡಿ ವಿಲಿಯರ್ಸ್‌ ಬ್ಯಾಟಿಂಗ್‌ ಸಾಧನೆ

–– ಪಂದ್ಯ ಇನಿಂಗ್ಸ್‌ ರನ್ ಶತಕ ಅರ್ಧಶತಕ ದ್ವಿಶತಕ ಗರಿಷ್ಠ
ಟೆಸ್ಟ್‌ 114 191 8765 22 46 2 278
ಏಕದಿನ 228 218 9577 25 53 176
ಟಿ20 78 75 1672 10 79
ಐಪಿಎಲ್‌ 154 142 4395 3 33 133

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು