ಶುಕ್ರವಾರ, ಜನವರಿ 17, 2020
22 °C
ಕ್ರಿಕೆಟ್

ಮೊಬೈಲ್ ಬಿಡಿ ಭಾಗದಿಂದ ಕೊಹ್ಲಿ ಕಲಾಕೃತಿ: ಅಭಿಮಾನಿಯ ಕಲಾಕೌಶಲ ಕಂಡು ಬೆರಗಾದ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹಟಿ: ಮೈದಾನದಲ್ಲಿ ವೀರಾವೇಷದ ಆಟವಾಡುವ ವಿರಾಟ್‌ ಕೊಹ್ಲಿ ಕೊಟ್ಯಂತರ ಅಭಿಮಾನಿಗಳ ನೆಚ್ಚಿನ ಕ್ರೀಡಾಪಟು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನರು ಹಿಂಬಾಲಿಸುವ ಕ್ರಿಕೆಟಿಗ ಎಂಬ ಶ್ರೇಯ ಇರುವ ಕೊಹ್ಲಿಯನ್ನು ಹತ್ತಿರದಿಂದ ಕಾಣಲು, ಅವರಿಂದ ಹಸ್ತಾಕ್ಷರ ಪಡೆಯಲು ಅಭಿಮಾನಿಗಳು ಮುಗಿ ಬೀಳುವುದನ್ನು ಕಂಡಿದ್ದೇವೆ. ಮತ್ತೆ ಕೆಲವರು ಸಿಬ್ಬಂದಿ ಕಣ್ತಪ್ಪಿಸಿ ಅಂಗಳಕ್ಕೆ ನುಗ್ಗಿದ ಪ್ರಸಂಗಗಳೂ ನಡೆದಿವೆ.

ಇದೆಲ್ಲದರ ನಡುವೆ ಇಲ್ಲೊಬ್ಬ ಅಭಿಮಾನಿ ಹಳೆಯ ಮತ್ತು ನಿಷ್ಕ್ರಿಯ ಮೊಬೈಲ್‌ಗಳ ಬಿಡಿ ಭಾಗಗಳನ್ನು ಬಳಸಿ ವಿರಾಟ್‌ ಭಾವಚಿತ್ರವನ್ನು ರಚಿಸಿ ಗಮನ ಸೆಳೆದಿದ್ದಾನೆ.

ಅಭಿಮಾನಿಯ ಕಲಾಕೌಶಲವನ್ನು ಕಂಡು ಬೆರಗಾಗಿರುವ ವಿರಾಟ್‌ ಕೊಹ್ಲಿ ಚಿತ್ರಪಟದ ಮೇಲೆ, ‘ಪ್ರೀತಿಯ ರಾಹುಲ್‌, ಇದೊಂದು ಅಸಾಧಾರಣ ಸೃಷ್ಟಿ. ಚೆನ್ನಾಗಿ ರಚಿಸಿದ್ದೀರಿ. ಶುಭವಾಗಲಿ’ ಎಂದು ಬರೆದು ಸಹಿ ಹಾಕಿದ್ದಾರೆ. ಈ ಸಂದರ್ಭದ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಖಾತೆಯಲ್ಲಿ ಹಾಕಿಕೊಂಡಿದೆ.

ಗುವಾಹಟಿ ಮೂಲದ ಕಲಾವಿದ ರಾಹುಲ್‌ ಈ ಕಲಾಕೃತಿಯನ್ನು ಮೂರು ಹಗಲು ಮತ್ತು ಮೂರು ರಾತ್ರಿ ಅವಧಿಯಲ್ಲಿ ರಚಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯ ಭಾನುವಾರ ಗುವಾಹಟಿಯಲ್ಲಿ ಆಯೋಜನೆಯಾಗಿತ್ತು. ಆದರೆ ಪಂದ್ಯವು ಒಂದೂ ಎಸೆತ ಕಾಣದೆ ರದ್ದಾಯಿತು. ಪಂದ್ಯಕ್ಕೂ ಮುನ್ನ ಕೊಹ್ಲಿ, ರಾಹಲ್‌ ಅವರನ್ನು ಭೇಟಿಯಾಗಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು