ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌: ರೋಚ್‌ ತಂದುಕೊಟ್ಟ ರೋಚಕ ಗೆಲುವು

Last Updated 16 ಆಗಸ್ಟ್ 2021, 11:34 IST
ಅಕ್ಷರ ಗಾತ್ರ

ಕಿಂಗ್ಸ್‌ಟನ್, ಜಮೈಕಾ: ಸೋಲಿನತ್ತ ಸಾಗುತ್ತಿದ್ದ ವೆಸ್ಟ್ ಇಂಡೀಸ್‌ ತಂಡಕ್ಕೆ ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳು ಆಸರೆಯಾದರು. ಅನುಭವಿ ಬೌಲರ್‌ ಕೆಮರ್ ರೋಚ್ ಮತ್ತು ಯುವ ಆಟಗಾರ ಜೇಡನ್ ಸೀಲ್ಸ್‌ ಕೊನೆಯ ವಿಕೆಟ್‌ಗೆ 17 ರನ್‌ಗಳ ಜೊತೆಯಾಟವಾಡಿ ಒಂದು ವಿಕೆಟ್‌ ಗೆಲುವು ತಂದುಕೊಟ್ಟರು.

ಪಾಕಿಸ್ತಾನ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನವಾದ ಭಾನುವಾರ 168 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಆತಿಥೇಯರು ಒಂದು ಹಂತದಲ್ಲಿ 16 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದರು. ಈ ಹಂತದಲ್ಲಿ ಜರ್ಮೈನ್ ಬ್ಲ್ಯಾಕ್‌ವುಡ್ ಅರ್ಧಶತಕ ಗಳಿಸಿ ಇನಿಂಗ್ಸ್‌ಗೆ ಬಲ ತುಂಬಿದರು. ಆದರೂ ಚಹಾ ವಿರಾಮದ ವೇಳೆ 114ಕ್ಕೆ 7 ವಿಕೆಟ್ ಕಳೆದುಕೊಂಡು ತಂಡ ಆತಂಕದಲ್ಲಿತ್ತು.

ಕೊನೆಯ ಅವಧಿಯಲ್ಲಿ ತಂಡದ ಗೆಲುವಿಗೆ 54 ರನ್‌ ಬೇಕಾಗಿತ್ತು. ಹೀಗಾಗಿ ಪಂದ್ಯ ರೋಚಕವಾಯಿತು. ಕೆಮರ್ ರೋಚ್ ಮತ್ತು ಜೋಶುವಾ ಸಿಲ್ವಾ 26 ರನ್‌ ಸೇರಿಸಿ ಗೆಲುವಿನತ್ತ ಮುನ್ನಡೆದರು. ಕೊನೆಗೆ 30 ರನ್ ಗಳಿಸಿ ಅಜೇಯರಾಗಿ ಉಳಿದ ರೋಚ್‌ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು.

ಸೀಲ್ಸ್ ಅವರು ಮೊದಲ ಬಾರಿ ಐದು ವಿಕೆಟ್ ಗಳಿಸಿ ಮಿಂಚಿದ ಪರಿಣಾಮ ಪಾಕಿಸ್ತಾನ ಎರಡನೇ ಇನಿಂಗ್ಸ್‌ನಲ್ಲಿ 203 ರನ್‌ಗಳಿಗೆ ಆಲೌಟಾಗಿತ್ತು. ಇದು, ವೆಸ್ಟ್‌ ಇಂಡೀಸ್‌ಗೆ ಸುಲಭ ಗೆಲುವಿನ ಗುರಿ ಸಿಗಲು ನೆರವಾಯಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಪಾಕಿಸ್ತಾನ: 217; ವೆಸ್ಟ್ ಇಂಡೀಸ್‌: 253; ಎರಡನೇ ಇನಿಂಗ್ಸ್‌: ಪಾಕಿಸ್ತಾನ: 203; ವೆಸ್ಟ್ ಇಂಡೀಸ್‌: 56.5 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 168 (ರಾಸ್ಟನ್ ಚೇಸ್ 22, ಜೆರ್ಮೈನ್ ಬ್ಲ್ಯಾಕ್‌ವುಡ್ 55, ಜೇಸನ್ ಹೋಲ್ಡರ್ 16, ಜೋಶುವಾ ಸಿಲ್ವಾ 13, ಕೆಮರ್ ರೋಚ್ ಔಟಾಗದೆ 30; ಶಹೀನ್ ಶಾ ಅಫ್ರಿದಿ 50ಕ್ಕೆ4, ಹಸನ್ ಅಲಿ 37ಕ್ಕೆ3, ಫಾಹೀನ್ ಅಶ್ರಫ್ 29ಕ್ಕೆ2). ಫಲಿತಾಂಶ: ವೆಸ್ಟ್ ಇಂಡೀಸ್‌ಗೆ 1 ವಿಕೆಟ್ ಜಯ; 2 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT