ವಿಶ್ವಕಪ್ ಪ್ರಸಾರ ಹಕ್ಕು ಪಡೆದಿರುವ ಸ್ಕೈ ಮತ್ತು ಚಾನೆಲ್ 4 ನಡುವೆ ಒಪ್ಪಂದದ ಪರಿಣಾಮ ಟೆಲಿವಿಷನ್ಗಳಲ್ಲಿ ಉಚಿತ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ. 1979, 1987, 1992ರ ಫೈನಲ್ ತಲುಪಿದ್ದ ಇಂಗ್ಲೆಂಡ್ ತಂಡಗಳಿಗಿಂತ,ಇಯಾನ್ ಮಾರ್ಗನ್ ನಾಯಕತ್ವದ ತಂಡ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬಹುದೆಂಬ ವಿಶ್ವಾಸದಲ್ಲಿ ಕೋಟ್ಯಂತರ ಅಭಿಮಾನಿಗಳು ನೇರಪ್ರಸಾರ ವೀಕ್ಷಿಸಬಹುದು ಎನ್ನುವ ವಿಶ್ವಾಸ ಈ ನಿರ್ಧಾರಕ್ಕೆ ಕಾರಣ.