ಸೋಮವಾರ, ಜನವರಿ 20, 2020
18 °C

ಫುಟ್‌ಬಾಲ್‌: ಆಸ್ಟಿನ್‌ ಕಾಲ್ಚಳಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಸ್ಟಿನ್‌ ಚುಕ್‌ವುಕಾ ಉಲುಚಾ ಗಳಿಸಿದ ಏಕೈಕ ಗೋಲಿನ ನೆರ ವಿನಿಂದ ಇನ್‌ಕಮ್‌ ಟ್ಯಾಕ್ಸ್‌ ಎಫ್‌ಸಿ ತಂಡ ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಇನ್‌ಕಮ್‌ ಟ್ಯಾಕ್ಸ್‌ ಎಫ್‌ಸಿ 1–0 ಗೋಲಿನಿಂದ ಸ್ಟೂಡೆಂಟ್ಸ್‌ ಯೂನಿ ಯನ್‌ ಎಫ್‌ಸಿ ತಂಡವನ್ನು ಮಣಿಸಿತು. ಆಸ್ಟಿನ್‌ 55ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.

ಇನ್ನೊಂದು ಪಂದ್ಯದಲ್ಲಿ ಕಿಕ್‌ ಸ್ಟಾರ್ಟ್‌ ಎಫ್‌ಸಿ ಕರ್ನಾಟಕ ತಂಡ 2–1 ಗೋಲುಗಳಿಂದ ಓಜೋನ್‌ ಎಫ್‌ಸಿ ಬೆಂಗಳೂರು ತಂಡವನ್ನು
ಪರಾಭವಗೊಳಿಸಿತು. ಕಿಕ್‌ಸ್ಟಾರ್ಟ್‌ ತಂಡದ ಕೀತ್‌ ರೇಮಂಡ್‌ ಸ್ಟೀಫನ್‌ (52ನೇ ನಿ.) ಮತ್ತು ಸುಧೀರ್‌ ಕೋಟಿ ಕೆಲಾ (75) ಗೋಲು ಬಾರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು