ಫುಟ್‌ಬಾಲ್: ಬ್ರೇವ್ಸ್‌ಗೆ ಚಾಂಪಿಯನ್ ಪಟ್ಟ

ಬೆಂಗಳೂರು: ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ಎಫ್‌ಸಿ ಮತ್ತು ಬೆಂಗಳೂರು ಬ್ರೇವ್ಸ್ ಎಫ್‌ಸಿ ತಂಡಗಳು ರಾಜ್ಯ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಮಹಿಳೆಯರ ‘ಎ’ ಡಿವಿಷನ್ ಫುಟ್‌ಬಾಲ್ ಟೂರ್ನಿಯಲ್ಲಿ ಶುಕ್ರವಾರ ಜಯ ಗಳಿಸಿದವು. ಅಂತಿಮ ಸುತ್ತಿನ ಪಂದ್ಯದ ಈ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದ ಬ್ರೇವ್ಸ್ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ತಂಡ 3–0ಯಿಂದ ಮಾತೃ ಪ್ರತಿಷ್ಠಾನ ವಿರುದ್ಧ ಜಯ ಗಳಿಸಿತು. ರೂಬಾ (13 ಮತ್ತು 45ನೇ ನಿಮಿಷ) ಹಾಗೂ ರಾವಲಿ (49ನೇ ನಿ) ಗೋಲು ಗಳಿಸಿದರು.
ರೆಬೆಲ್ಸ್ ವಿಮೆನ್ಸ್ ಎಫ್‌ಸಿ ವಿರುದ್ಧ 1–0 ಗೋಲಿನಿಂದ ಬೆಂಗಳೂರು ಬ್ರೇವ್ಸ್ ಎಫ್‌ಸಿ ಗೆಲುವು ಸಾಧಿಸಿತು. 27ನೇ ನಿಮಿಷದಲ್ಲಿ ಪ್ರಿಯದರ್ಶಿನಿ ಪಂದ್ಯದ ಏಕೈಕ ಗೋಲು ಗಳಿಸಿದರು.
ಬೆಂಗಳೂರು ಬ್ರೇವ್ಸ್ ಎಫ್‌ಸಿ, ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ಎಫ್‌ಸಿ, ಮಾತೃ ಪ್ರತಿಷ್ಠಾನ ಎಫ್‌ಸಿ ಮತ್ತು ರೆಬೆಲ್ಸ್ ವಿಮೆನ್ಸ್ ಎಫ್‌ಸಿ ತಂಡಗಳು ಸೂಪರ್ ಡಿವಿಷನ್‌ಗೆ ಬಡ್ತಿ ಪಡೆದವು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.