ಫುಟ್‌ಬಾಲ್‌: ನಾಕೌಟ್‌ಗೆ ಎಚ್‌ಎಎಲ್‌

ಬುಧವಾರ, ಏಪ್ರಿಲ್ 24, 2019
23 °C

ಫುಟ್‌ಬಾಲ್‌: ನಾಕೌಟ್‌ಗೆ ಎಚ್‌ಎಎಲ್‌

Published:
Updated:

ಬೆಂಗಳೂರು: ಎಚ್‌ಎಎಲ್‌ ಎಫ್‌ಸಿ ತಂಡದವರು ಬಿಡಿಎಫ್‌ಎ ಆಶ್ರಯದ ‘ಸಿ’ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ನಾಕೌಟ್‌ಗೆ ಲಗ್ಗೆ ಇಟ್ಟಿದ್ದಾರೆ.

ಅಶೋಕನಗರದ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಎಚ್‌ಎಎಲ್‌ 4–0 ಗೋಲುಗಳಿಂದ ಮಹಾರಾಜ ಸೋಷಿಯಲ್ಸ್‌ ಎಫ್‌ಸಿ ಎದುರು ಗೆದ್ದಿತು.

ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 15ಕ್ಕೆ ಹೆಚ್ಚಿಸಿಕೊಂಡಿರುವ ಎಚ್‌ಎಎಲ್‌ ‘ಡಿ’ ವಲಯದ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ತನ್ನದಾಗಿಸಿಕೊಂಡಿದೆ.

ವಿಜಯೀ ತಂಡದ ಅಲೋಷಿಯಸ್‌ 7 ಮತ್ತು 25ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಬಿಬಿನ್‌ ಅವರು 16 ಮತ್ತು 60ನೇ ನಿಮಿಷಗಳಲ್ಲಿ ಗೋಲು ಹೊಡೆದರು.

ಇನ್ನೊಂದು ಪಂದ್ಯದಲ್ಲಿ ಧರ್ಮರಾಜ ಯೂನಿಯನ್‌ ಎಫ್‌ಸಿ 2–0 ಗೋಲುಗಳಿಂದ ಪಿಳ್ಳಣ್ಣ ಗಾರ್ಡನ್‌ ಎಫ್‌ಸಿ ತಂಡವನ್ನು ಸೋಲಿಸಿತು.

ಧರ್ಮರಾಜ ತಂಡದ ರೋಷನ್‌ ಮತ್ತು ಅಲ್ಬರ್ಟ್‌ ಕ್ರಮವಾಗಿ 37 ಮತ್ತು 40ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಸದರ್ನ್‌ ಬ್ಲೂಸ್‌ ಎಫ್‌ಸಿ ತಂಡ 2–0 ಗೋಲುಗಳಿಂದ ತ್ರಿವೇಣಿ ಎಫ್‌ಸಿ ಎದುರು ಗೆದ್ದಿತು.

ರಾಹುಲ್‌ ಮತ್ತು ಆನಂದ್‌ ಕ್ರಮವಾಗಿ 17 ಮತ್ತು 26ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !