ಕೋವಿಡ್ ಪರಿಣಾಮ: 2023ರ ಏಷ್ಯಾ ಕಪ್ ಫುಟ್‌ಬಾಲ್ ಆತಿಥ್ಯದಿಂದ ಹಿಂದೆ ಸರಿದ ಚೀನಾ

ಕ್ವಾಲಾಲಂಪುರ: ಕೋವಿಡ್–19 ಸಾಂಕ್ರಾಮಿಕ ಮತ್ತೆ ಹೆಚ್ಚಳಗೊಂಡಿರುವುದರಿಂದ 2023ರ ಏಷ್ಯಾ ಕಪ್ ಫುಟ್‌ಬಾಲ್ ಆತಿಥ್ಯದಿಂದ ಚೀನಾ ಹಿಂದೆ ಸರಿದಿದೆ.
‘ಕೋವಿಡ್ ಸಾಂಕ್ರಾಮಿಕದಿಂದಾಗಿ ಸೃಷ್ಟಿಯಾಗಿರುವ ಸನ್ನಿವೇಶವನ್ನು ಏಷ್ಯಾ ಫುಟ್‌ಬಾಲ್ ಒಕ್ಕೂಟವು (ಎಎಫ್‌ಸಿ) ಅರ್ಥಮಾಡಿಕೊಂಡಿದೆ. ಇದೇ ಕಾರಣಕ್ಕೆ ಚೀನಾವು ಆತಿಥ್ಯದ ಹಕ್ಕನ್ನು ಬಿಟ್ಟುಕೊಡಬೇಕಾಗಿ ಬಂದಿದೆ’ ಎಂದು ಎಎಫ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಔಟಾಗಿ ತೆರಳುವಾಗ ಆಗಸದತ್ತ ಮುಖ ಮಾಡಿ ಮಾತನಾಡಿಕೊಂಡ ವಿರಾಟ್: ವಿಡಿಯೊ ವೈರಲ್
24 ತಂಡಗಳು ಭಾಗವಹಿಸಲಿರುವ ಏಷ್ಯಾ ಕಪ್ ಫುಟ್‌ಬಾಲ್ ಟೂರ್ನಿಯನ್ನು ಮುಂದಿನ ವರ್ಷ ಜೂನ್ ಮತ್ತು ಜುಲೈಯಲ್ಲಿ ಚೀನಾದ 10 ನಗರಗಳಲ್ಲಿ ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ, ಟೂರ್ನಿ ಆಯೋಜಿಸಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಚೀನಾದ ಫುಟ್‌ಬಾಲ್ ಸಂಸ್ಥೆ ತಿಳಿಸಿರುವುದಾಗಿ ಎಎಫ್‌ಸಿ ಮಾಹಿತಿ ನೀಡಿದೆ.
ಕೊರೊನಾ ವೈರಸ್ ಪ್ರಸರಣ ತಡೆಗಾಗಿ ಕಳೆದ ಕೆಲವು ತಿಂಗಳುಗಳಿಂದ ಚೀನಾವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅತಿದೊಡ್ಡ ನಗರ ಶಾಂಘೈಯಲ್ಲಿ ಲಾಕ್‌ಡೌನ್ ಹೇರಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.