ಮಂಗಳವಾರ, ಫೆಬ್ರವರಿ 7, 2023
25 °C
ದಕ್ಷಿಣ ಕನ್ನಡ ಜಿಲ್ಲೆಯ ಕಬಕ ಮೂಲದ ಅನಿವಾಸಿ ಕನ್ನಡಿಗ ಖಾಲಿದ್‌

ಫಿಫಾ ವಿಶ್ವಕಪ್‌ ಕ್ರೀಡಾಂಗಣದಲ್ಲೂ ರಾರಾಜಿಸಿದ ಪುನೀತ್‌ ರಾಜ್‌ಕುಮಾರ್‌ ಫೋಟೋ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಕತಾರ್‌: ಇಲ್ಲಿ ನಡೆಯುತ್ತಿರುವ ಫಿಫಾ ಫುಟ್‌ಬಾಲ್‌ ವಿಶ್ವ‍ಕಪ್ ಪಂದ್ಯಾವಳಿಯಲ್ಲಿ ಕನ್ನಡಿಗ ಕ್ರೀಡಾ ಪ್ರೇಮಿಯೊಬ್ಬರು ‘ಕರ್ನಾಟಕ ರತ್ನ‘ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಫೋಟೋ ಪ್ರದರ್ಶನ ಮಾಡಿ ಅಭಿಮಾನ ಮೆರೆದಿದ್ದಾರೆ.

ಆ ಮೂಲಕ ‘ಅ‍ಪ್ಪು‘ ಅವರ ಮೇಲಿನ ಕನ್ನಡಿಗರ ಪ್ರೇಮ, ಸಾಗರ ದಾಟಿ ಕೊಲ್ಲಿ ರಾಷ್ಟ್ರದಲ್ಲೂ ಪ್ರತಿಫಲಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಮೂಲದ ಅನಿವಾಸಿ ಕನ್ನಡಿಗ ಖಾಲಿದ್‌ ಎಂಬವರೇ ಫಿಫಾ ವಿಶ್ವಕಪ್‌ ನಡೆಯುವ ಕ್ರೀಡಾಂಗಣದಲ್ಲಿ ಪುನೀತ್‌ ಅವರ ಚಿತ್ರ ಪ್ರದರ್ಶಿನ ಮಾಡಿದವರು.

‘ನಾನು ಪುನೀತ್ ರಾಜ್‌ಕುಮಾರ್‌ ಅವರ ಅಭಿಮಾನಿ. ಅವರು ಮಾಡಿರುವ ಸಮಾಜಮುಖಿ ಕೆಲಸಗಳಿಂದ ನಾನು ಪ್ರಭಾವಿತನಾಗಿದ್ದೇನೆ. ಹೀಗಾಗಿ ಫಿಫಾ ವಿಶ್ವಕಪ್‌ ನಡೆಯುವ ಕ್ರೀಡಾಂಗಣದಲ್ಲಿ ಅವರ ಫೋಟೋ ಪ್ರದರ್ಶನ ಮಾಡಿದೆ‘ ಎಂದು ಖಾಲಿದ್‌ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ಖಾಲಿದ್, ಕಳೆದ ಹಲವಾರು ವರ್ಷಗಳಿಂದ ಕತಾರ್‌ನಲ್ಲಿ ಉದ್ಯೋಗಿಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು