ಫಿಫಾ ವಿಶ್ವಕಪ್ ಸೋಲು: ಮೈದಾನಕ್ಕಿಳಿದು ಆಟಗಾರರನ್ನು ಸಂತೈಸಿದ ಫ್ರಾನ್ಸ್ ಅಧ್ಯಕ್ಷ

ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಎದುರು ಸೋಲು ಕಂಡು, ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡ ತಮ್ಮ ತಂಡದ ಆಟಗಾರರನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಸಂತೈಸಿದ್ದಾರೆ.
ಕತಾರ್‌ನ ರಾಜಧಾನಿ ದೋಹಾದ ಲುಸೈಲ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಫ್ರಾನ್ಸ್ ಎದುರು ಗೆಲುವಿನ ಸಂಭ್ರಮ ಆಚರಿಸಿತ್ತು.
ಉಭಯ ತಂಡಗಳು ಪಂದ್ಯದ ನಿಗದಿತ ಮತ್ತು ಹೆಚ್ಚುವರಿ ಅವಧಿಯಲ್ಲಿ 3–3 ಗೋಲುಗಳಿಂದ ಸಮಬಲ ಸಾಧಿಸಿದ್ದವು.
ಅರ್ಜೆಂಟೀನಾ ಪರ ಲಯೊನೆಲ್ ಮೆಸ್ಸಿ (23 ಮತ್ತು 109ನೇ ನಿಮಿಷದಲ್ಲಿ) ಎರಡು ಗೋಲುಗಳನ್ನು ಗಳಿಸಿದರೆ, ಇನ್ನೊಂದು ಗೋಲನ್ನು ಏಂಜೆಲ್ ಡಿ ಮರಿಯಾ (36ನೇ ನಿಮಿಷದಲ್ಲಿ) ತಂದಿತ್ತರು. ಫ್ರಾನ್ಸ್ ತಂಡದ ಮೂರೂ ಗೋಲುಗಳನ್ನು ಕಿಲಿಯಾನ್ ಎಂಬಾಪೆ (80, 81 ಮತ್ತು 118ನೇ ನಿಮಿಷದಲ್ಲಿ) ಗಳಿಸಿದರು.
ಇದನ್ನೂ ಓದಿ: FIFA World Cup: ಮೆಸ್ಸಿಗೆ ‘ಗೋಲ್ಡನ್ ಬಾಲ್’, ಎಂಬಾಪೆಗೆ ‘ಗೋಲ್ಡನ್ ಬೂಟ್’
ಇದರಿಂದ ವಿಜೇತರನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಗಿತ್ತು.
ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ ತಂಡ 4–2 ಗೋಲುಗಳ ಅಂತರದ ಮೇಲುಗೈ ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿತು. ಅರ್ಜೆಂಟೀನಾ ಪರ ಮೆಸ್ಸಿ, ಪೌಲೊ ಡಿಬಾಲಾ, ಲಿಯಾಂಡ್ರೊ ಪೆರೆಡೆಸ್, ಗೊಂಜಾಲೊ ಮೊಂಟಿಯಲ್ ಚೆಂಡನ್ನು ಗುರಿ ಸೇರಿಸಿದರು. ಆದರೆ, ಫ್ರಾನ್ಸ್ ಪರ ಎಂಬಾಪೆ ಮತ್ತು ರಂಡಲ್ ಕೊಲೊ ಮುವಾನಿ ಮಾತ್ರ ಯಶಸ್ಸು ಸಾಧಿಸಿದರು.
ಆಟಗಾರರನ್ನು ಹುರಿದುಂಬಿಸಿದ ಮ್ಯಾಕ್ರಾನ್
ಸೋಲಿನಿಂದ ಕಂಗೆಟ್ಟಿದ್ದ ತಮ್ಮ ತಂಡದ ಆಟಗಾರರನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಸ್ವತಃ ಮೈದಾನಕ್ಕಿಳಿದು ಸಂತೈಸಿದರು.
ಹ್ಯಾಟ್ರಿಕ್ ಗೋಲು ಗಳಿಸಿಯೂ, ವಿಶ್ವಕಪ್ ಗೆಲ್ಲಲು ಸಾಧ್ಯವಾಗದ್ದಕ್ಕೆ 23 ವರ್ಷದ ಎಂಬಾಪೆ ಅಕ್ಷರಶಃ ದುಖಃದಲ್ಲಿದ್ದರು. ಮೈದಾನದಲ್ಲಿ ಕುಸಿದು ಕುಳಿತಿದ್ದ ಅವರತ್ತ ಬಂದ ಮ್ಯಾಕ್ರಾನ್, ಸಮಾಧಾನದ ಮಾತುಗಳನ್ನಾಡಿ ಹುರಿದುಂಬಿಸಿದರು.
ಮ್ಯಾಕ್ರಾನ್ ಅವರು ಎಂಬಾಬೆ ಬೆನ್ನು ತಟ್ಟುತ್ತಾ, ಮೈದಾನದಲ್ಲಿ ಕುಳಿತು ಮಾತನಾಡುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ: Kylian Mbappe | ಕಿಲಿಯನ್ ಎಂಬಾಪೆ... ‘ಅಪರಾಧ ಸಂತಾನಗಳ ಅಂಗಳ‘ದ ಕಪ್ಪು ಹೂ
ಮ್ಯಾಕ್ರಾನ್ ಅವರು, ಮೈದಾನದಲ್ಲಿ ಮಾತ್ರವಲ್ಲದೆ ಡ್ರೆಸ್ಸಿಂಗ್ ಕೊಠಡಿಗೂ ತೆರಳಿ ಆಟಗಾರರನ್ನು ಪ್ರೇರೇಪಿಸಿದ್ದಾರೆ. ಈ ವಿಡಿಯೊವನ್ನು ಸ್ವತಃ ಹಂಚಿಕೊಂಡಿರುವ ಅವರು, 'ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತಿದೆ' ಎಂದು ಬರೆದುಕೊಂಡಿದ್ದಾರೆ.
ಮ್ಯಾಕ್ರಾನ್ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Quand tu foires totalement ton opération de récup ça donne ça :
pic.twitter.com/peFbaNsHv0— Pierre Gentillet (@Pierre_GTIL) December 19, 2022
ಎಂಬಾಪೆ ಹ್ಯಾಟ್ರಿಕ್ ಸಾಧನೆ
ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಎರಡನೇ ಆಟಗಾರ ಎಂಬ ಗೌರವ ಎಂಬಾಪೆ ಅವರದ್ದಾಯಿತು. ಇದಕ್ಕೂ ಮೊದಲು ಇಂಗ್ಲೆಂಡ್‌ನ ಜೆಫ್ ಹಸ್ಟ್ ಮಾತ್ರವೇ ಈ ಸಾಧನೆ ಮಾಡಿದ್ದರು.
ಜೆಫ್, 1966ರ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಪಶ್ಚಿಮ ಜರ್ಮನಿ ವಿರುದ್ಧ ಮೂರು ಗೋಲುಗಳನ್ನು ಗಳಿಸಿದ್ದರು. ಆ ಪಂದ್ಯವನ್ನು ಇಂಗ್ಲೆಂಡ್ 4–2 ರಲ್ಲಿ ಗೆದ್ದುಕೊಂಡಿತ್ತು.
ಇದನ್ನೂ ಓದಿ: FIFA World Cup | ಅರ್ಜೆಂಟೀನಾಗೆ ಪ್ರಶಸ್ತಿ: ಮೆಸ್ಸಿಗೆ ಕನಸು ಕೈಗೂಡಿದ ಸಂಭ್ರಮ
ಅಷ್ಟೇ ಅಲ್ಲ, ಫುಟ್‌ಬಾಲ್ ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಹೆಚ್ಚು (4) ಗೋಲು ಗಳಿಸಿದ ದಾಖಲೆಯೂ ಎಂಬಾಪೆ ಅವರದ್ದಾಯಿತು. ಅವರು ಕಳೆದ ಬಾರಿಯ (2018ರ) ಫೈನಲ್‌ನಲ್ಲಿ ಕ್ರೊವೇಷ್ಯಾ ವಿರುದ್ಧ ಒಂದು ಗೋಲು ಗಳಿಸಿದ್ದರು. ಆ ಪಂದ್ಯವನ್ನು 4–2 ಗೋಲುಗಳ ಅಂತರದಿಂದ ಗೆದ್ದಿದ್ದ ಫ್ರಾನ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.
ಎಂಬಾಪೆ ಹೊರತುಪಡಿಸಿ, ಬ್ರೆಜಿಲ್‌ನ ದಿಗ್ಗಜ ಆಟಗಾರರಾದ ಪೆಲೆ, ವವಾ, ಫ್ರಾನ್ಸ್‌ನ ಝಿನಡೀನ್ ಜಿದಾನೆ ಮತ್ತು ಇಂಗ್ಲೆಂಡ್‌ನ ಜೆಫ್ ಹಸ್ಟ್ ಅವರು ಫೈನಲ್ ಪಂದ್ಯಗಳಲ್ಲಿ ತಲಾ ಮೂರು ಗೋಲುಗಳನ್ನು ಗಳಿಸಿದ್ದಾರೆ.
ಈ ಬಾರಿ ಒಟ್ಟು ಎಂಟು ಗೋಲುಗಳನ್ನು ಬಾರಿಸಿ 'ಗೋಲ್ಡನ್ ಬೂಟ್' ಪ್ರಶಸ್ತಿ ಗೆದ್ದುಕೊಂಡ ಎಂಬಾಪೆ ಅವರು, ವಿಶ್ವಕಪ್ ಟೂರ್ನಿಗಳಲ್ಲಿ ಇದುವರೆಗೆ ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ 12ಕ್ಕೆ ಏರಿದೆ.
Fiers de vous. pic.twitter.com/9RMjIGMKGU
— Emmanuel Macron (@EmmanuelMacron) December 18, 2022
What a leader 👌👌👌 @EmmanuelMacron pic.twitter.com/OrE8qUmHYE
— 🦏 Payal M/પાયલ મેહતા/ पायल मेहता/ পাযেল মেহতা (@payalmehta100) December 18, 2022
#KylianMbappe You are strong ❤️ @EmmanuelMacron @KMbappe pic.twitter.com/PkptkU0UWG
— Shilpa Thakur (@Shilpaa30thakur) December 19, 2022
That's how a Leader is with his Team after a Battle which they fought with their Heart & yet lost
Great Leadership @EmmanuelMacron as you saw Team @equipedefrance do their best with 2comebacks
Cheer Up @KMbappe as the years ahead will be filled with Glory & you will be Glorious pic.twitter.com/a0DIXTBGb4
— Colonel Rohit Dev (RDX) 🇮🇳 (@RDXThinksThat) December 18, 2022
Cette image est terrible. #EmmanuelMacron accroupi réconfortant #Mbappé. Le joueur ne lui parle pas, ne lui répond pas, ne le regarde pas… pic.twitter.com/Dh3OU7z5Br
— Alain Jakubowicz (@JakubowiczA) December 18, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.