ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರೋಪಿಯನ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಫಿನ್‌ಲೆಂಡ್‌ಗೆ ಮಣಿದ ಡೆನ್ಮಾರ್ಕ್‌

ಯೂರೋಪಿಯನ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌
Last Updated 13 ಜೂನ್ 2021, 10:15 IST
ಅಕ್ಷರ ಗಾತ್ರ

ಕೋಪನ್‌ಹೇಗನ್‌, ಡೆನ್ಮಾರ್ಕ್‌: ಜೋಯಲ್‌ ಪೋಜನ್‌ಪಾಲೊ ಗಳಿಸಿದ ಗೋಲಿನ ನೆರವಿನಿಂದ ಫಿನ್‌ಲೆಂಡ್‌ ತಂಡವು ಡೆನ್ಮಾರ್ಕ್ ತಂಡವನ್ನು ಸೋಲಿಸಿತು. ಇಲ್ಲಿಶನಿವಾರ ನಡೆದ ಯೂರೋಪಿಯನ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ ಪ್ರವಾಸಿ ತಂಡ 1–0ಯಿಂದ ಗೆದ್ದಿತು.

ಡೆನ್ಮಾರ್ಕ್ ತಂಡದ ಕ್ರಿಸ್ಟಿಯನ್ ಎರಿಕ್ಸನ್‌ ಅವರು ಕ್ರೀಡಾಂಗಣದಲ್ಲಿ ಕುಸಿದುಬಿದ್ದ ಕಾರಣ ಪಂದ್ಯವನ್ನು 90 ನಿಮಿಷಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಪಂದ್ಯದ 43ನೇ ನಿಮಿಷದಲ್ಲಿ ಈ ಘಟನೆ ನಡೆದಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಎರಿಕ್ಸನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಡೆನ್ಮಾರ್ಕ್ ಫುಟ್‌ಬಾಲ್ ಫೆಡರೇಷನ್ ಮಾಹಿತಿ ನೀಡಿತ್ತು.

ಪಂದ್ಯದ 60ನೇ ನಿಮಿಷದಲ್ಲಿ ಜೆರೆ ಯುರೊನೆನ್‌ ನೆರವಿನೊಂದಿಗೆ ಪೋಜನ್‌ಪಾಲೊ ಕಾಲ್ಚಳಕ ತೋರಿದರು. ಡೆನ್ಮಾರ್ಕ್‌ನ ಗೋಲ್‌ಕೀಪರ್‌ ಕಾಸ್ಪರ್‌ ಶೆಮಿಚೆಲ್‌ ಅದನ್ನು ತಡೆಯುವ ಯತ್ನ ನಡೆಸಿದರೂ ಸಫಲರಾಗಲಿಲ್ಲ. ಆದರೆ ಪಂದ್ಯದುದ್ದಕ್ಕೂ ಡೆನ್ಮಾರ್ಕ್ ಆಟಗಾರರ ಪ್ರಾಬಲ್ಯ ಹೆಚ್ಚಾಗಿತ್ತು. ಗೋಲು ಗಳಿಸಲು ನಡೆಸಿದ ಒಂದೇ ಪ್ರಯತ್ನದಲ್ಲಿ ಫಿನ್‌ಲೆಂಡ್ ಯಶಸ್ವಿಯಾಗಿತ್ತು.

ಫಿನ್‌ಲೆಂಡ್‌ ಗೋಲ್‌ಕೀಪರ್ ಲೂಕಾಸ್‌ ರಾಡೆಕಿ ಪೆನಾಲ್ಟಿಯೊಂದನ್ನು ತಡೆಯುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

‘ಬಿ’ ಗುಂಪಿನ ಇನ್ನೊಂದು ಪಂದ್ಯದಲ್ಲಿ ಅಗ್ರ ಕ್ರಮಾಂಕದ ಬೆಲ್ಜಿಯಂ ತಂಡವು 3–0ಯಿಂದ ರಷ್ಯಾವನ್ನು ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT