ಬೆಂಗಳೂರು: ಜಯಶ್ರೀ ಅವರು ಗಳಿಸಿದ ಐದು ಸೊಗಸಾದ ಗೋಲುಗಳ ಬಲದಿಂದ ಯುನೈಟೆಡ್ ಎಫ್‌ಸಿ ಕೊಡಗು ತಂಡವು ಭರ್ಜರಿ ಜಯ ಗಳಿಸಿತು. ಕೆಎಸ್‌ಎಫ್‌ಎ ಸ್ಪೋರ್ಟಿಂಗ್ ಪ್ಲಾನೆಟ್ ಟ್ರೋಫಿ ಮಹಿಳೆಯರ ‘ಎ’ ಡಿವಿಷನ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಭಾನುವಾರ 6–0 ಗೋಲುಗಳಿಂದ ಯಂಗ್ ಸ್ಟಾರ್ ತಂಡವನ್ನು ಮಣಿಸಿತು.

‘ಎ‘ ಗುಂಪಿನ ಈ ಪಂದ್ಯದಲ್ಲಿ ವಿಜೇತ ತಂಡದ ಪರ ಜಯಶ್ರೀ 13, 18, 22, 27 ಮತ್ತು 36ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ನಿಖಿತಾ (28ನೇ ನಿ.) ಒಂದು ಗೋಲು ದಾಖಲಿಸಿದರು.

ರೌಡಿ ಅರವಿಂದ್ ಹತ್ಯೆ ಹಿನ್ನೆಲೆಯಲ್ಲಿ ರೂಟ್ಸ್ ಎಫ್‌ಸಿ ಮತ್ತು ಜಿಆರ್‌ಕೆ ಎಫ್‌ಸಿ ಪಂದ್ಯವನ್ನು ಮುಂದೂಡಲಾಯಿತು. ಮುಂದಿನ ಸೂಚನೆಯ ವರೆಗೆ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಯಾವ ಪಂದ್ಯವನ್ನೂ ನಡೆಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.