ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಫ್‌ಸಿ: ಪ್ಲೇಆಫ್‌ಗೆ ಬಿಎಫ್‌ಸಿ

ಹಾಕಿಪ್, ದೇಶಾನ್ ಹ್ಯಾಟ್ರಿಕ್; ಬೆಂಗಳೂರಿಗೆ ಭಾರಿ ಜಯ
Last Updated 12 ಫೆಬ್ರುವರಿ 2020, 19:23 IST
ಅಕ್ಷರ ಗಾತ್ರ

ಬೆಂಗಳೂರು: ಗೋಲುಗಳ ಮಳೆಗರೆದ ಬೆಂಗಳೂರು ಎಫ್‌ಸಿ ತಂಡ ಎಎಫ್‌ಸಿ ಕಪ್‌ ಅರ್ಹತಾ ಸುತ್ತಿನ ಎರಡನೇ ಲೆಗ್ ಪಂದ್ಯದಲ್ಲಿ ಭೂತಾನ್‌ನ ಪಾರೊ ಎಫ್‌ಸಿ ತಂಡವನ್ನು 9–1 ಅಂತರದಿಂದ ಸೋಲಿಸಿತು. ಇದು, ಬಿಎಫ್‌ಸಿ ಈ ವರೆಗೆ ಯಾವುದೇ ಪಂದ್ಯದಲ್ಲಿ ಗಳಿಸಿದ ಅತಿ ಹೆಚ್ಚು ಅಂತರದ ಜಯವಾಗಿದೆ. ಶೆಂಬೊಯ್ ಹಾಕಿಪ್‌ (4) ಮತ್ತು ದೇಶಾನ್‌ ಬ್ರೌನ್‌ (3) ಹ್ಯಾಟ್ರಿಕ್‌ ಸಾಧಿಸಿ ಬಿಎಫ್‌ಸಿ ಗೆಲುವಿನಲ್ಲಿ ಮಿಂಚಿದರು.

ಥಿಂಪುವಿನಲ್ಲಿ ಕಳೆದ ವಾರ ನಡೆದಿದ್ದ ಮೊದಲ ಲೆಗ್‌ ಪಂದ್ಯದಲ್ಲಿ ಬಿಎಫ್‌ಸಿ 1–0 ಗೆಲುವು ಪಡೆದಿತ್ತು. ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಜಯಿಸುವುದರೊಂದಿಗೆ ಅರ್ಹತಾ ಸುತ್ತಿನ ಅಂತಿಮ ಹಂತ ತಲುಪಿದ ಬೆಂಗಳೂರು ತಂಡ ಪ್ಲೇ ಆಫ್‌ ಸುತ್ತಿನಲ್ಲಿ ಮಾಲ್ಡೀವ್ಸ್‌ನ ಮಝಿಯಾ ತಂಡವನ್ನು ಎದುರಿಸಲಿದೆ.

ಮೊದಲ ಲೆಗ್‌ ಗೆಲುವಿನಲ್ಲಿ ನಿರ್ಣಾಯಕ ಗೋಲು ಬಾರಿಸಿದ್ದ ಹಾಕಿಪ್‌, ಬುಧವಾರ ಆರನೇ ನಿಮಿಷ ದಲ್ಲೇ ಬಿಎಫ್‌ಸಿಯ ಖಾತೆ ತೆರೆದರು.

ನಂತರ, 26, 67 ಮತ್ತು 85ನೇ ನಿಮಿಷ ಮೂರು ಗೋಲುಗಳನ್ನು ಬಾರಿಸಿದರು.

ಜಮೈಕಾದವರಾದ ಬ್ರೌನ್‌ ಪಂದ್ಯದ 29. 54 ಮತ್ತು 64ನೇ ನಿಮಿಷ ಗೋಲುಗಳನ್ನು ಗಳಿಸಿದರು. ಜುವಾನನ್‌ ಗೊನ್ವಾಲ್ವೆಝ್‌ (14) ಮತ್ತು ನೀಲಿ ಪೆಡ್ರೊಮೊ (79) ಇನ್ನೆರಡು ಗೋಲುಗಳನ್ನು ತಂದಿತ್ತರು.

ಪಾರೊ ಎಫ್‌ಸಿ ತಂಡದ ಏಕೈಕ ಗೋಲು ವಿಂಗರ್‌ ಚೆಂಚೊ ಜಿಲ್ಟ್‌ಸೇನ್‌ ಮೂಲಕ 16ನೇ ನಿಮಿಷ ದಾಖಲಾಯಿತು.

ನಾಯಕ ಸುನಿಲ್‌ ಚೆಟ್ರಿ ಸ್ನಾಯು ನೋವಿನಿಂದಾಗಿ ಆಡದೇ ವಿಶ್ರಾಂತಿ ಪಡೆದರು. ಇನ್ನೊಬ್ಬ ಪ್ರಮುಖ ಆಟಗಾರ ಉದಾಂತ ಸಿಂಗ್‌ ಪಂದ್ಯದ ಕೊನೆಯ ಗಳಿಗೆಯಲ್ಲಿ ಕಣಕ್ಕೆ ಇಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT