ಗುರುವಾರ , ಅಕ್ಟೋಬರ್ 22, 2020
27 °C

ಹೈದರಾಬಾದ್‌ ಎಫ್‌ಸಿ ಸೇರಿದ ಆಕಾಶ್‌, ರೋಹಿತ್‌, ಬಿಯಾಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಇಂಡಿಯನ್‌ ಸೂಪರ್ ಲೀಗ್ ಟೂರ್ನಿಯಲ್ಲಿ ಆಡುವ ಹೈದರಾಬಾದ್‌ ಫುಟ್‌ಬಾಲ್‌ ಕ್ಲಬ್‌ ಶುಕ್ರವಾರ ಯುವ ಆಟಗಾರರಾದ ಆಕಾಶ್‌ ಮಿಶ್ರಾ, ರೋಹಿತ್‌ ಧನು ಹಾಗೂ ಲಾಲ್‌ಬಾಯಕ್ಲುವಾ ‘ಬಿಯಾಕ‘ ಜಾಂಗ್ಟೆ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಐಎಸ್‌ಎಲ್‌ನ 2022–23ರ ಆವೃತ್ತಿಯವರೆಗೆ ಈ ಮೂವರು ತಂಡದಲ್ಲಿರಲಿದ್ದಾರೆ.

ಇದಕ್ಕೂ ಮೊದಲು ಈ ಆಟಗಾರರು ಐ–ಲೀಗ್‌ ಟೂರ್ನಿಯಲ್ಲಿ ಇಂಡಿಯನ್‌ ಏರೋಸ್‌ ತಂಡದ ಪರ ಆಡುತ್ತಿದ್ದರು. ಯುವ ವಿಭಾಗದಲ್ಲಿ ರಾಷ್ಟ್ರೀಯ ತಂಡವನ್ನೂ ಪ್ರತಿನಿಧಿಸಿದ್ದಾರೆ.

‘ಯುವ ಹಾಗೂ ಅನುಭವಿ ಆಟಗಾರರ ಮಿಶ್ರಣದ ತಂಡ ಕಟ್ಟುವುದು ನಮ್ಮ ಕ್ಲಬ್‌ನ ಉದ್ದೇಶ‘ ಎಂದು ಹೈದರಾಬಾದ್‌ ಎಫ್‌ಸಿಯ ಸಹ ಮಾಲೀಕ ವರುಣ್‌ ತ್ರಿಪುರನೇಣಿ ಹೇಳಿದ್ದಾರೆ.

‘ಮೂವರು ಆಟಗಾರರು ಸದ್ಯ ಗೋವಾದಲ್ಲಿರುವ ತಂಡದೊಂದಿಗೆ ತರಬೇತಿ ನಿರತರಾಗಿದ್ದಾರೆ. ಭವಿಷ್ಯದಲ್ಲಿ ಕ್ಲಬ್‌ನ ಪ್ರಮುಖ ಆಟಗಾರರಾಗಿ ಹೊರಹೊಮ್ಮುವ ವಿಶ್ವಾಸವಿದೆ‘ ಎಂದು ವರುಣ್‌ ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು