ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಭೂತಾನ್ ವಿರುದ್ಧ ಭಾರತಕ್ಕೆ ಜಯ

Published 2 ಫೆಬ್ರುವರಿ 2024, 23:30 IST
Last Updated 2 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಢಾಕಾ: ಭಾರತ ತಂಡ ಸ್ಯಾಫ್‌ 19 ವರ್ಷದೊಳಗಿನವರ ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ 10–0 ಗೋಲುಗಳಿಂದ ಭೂತಾನ್ ತಂಡವನ್ನು ಸೋಲಿಸಿತು. ಶುಕ್ರವಾರ ನಡೆದ ಪಂದ್ಯದಲ್ಲಿ ವಿಜೇತ ತಂಡದ ಪೂಜಾ ನಾಲ್ಕು ಗೋಲುಗಳನ್ನು ಗಳಿಸಿದರು.

ಪೂಜಾ 31, 58, 59 ಮತ್ತು ಇಂಜ್ಯುರಿ ಅವಧಿಯಲ್ಲಿ ಗೋಲುಗಳನ್ನು ಗಳಿಸಿದರು. ಸಿಬಾನಿ ದೇವಿ (8, 19 ಮತ್ತು 36ನೇ) ಅವರು ವಿರಾಮಕ್ಕೆ ಮೊದಲೇ ಹ್ಯಾಟ್ರಿಕ್ ಸಾಧಿಸಿದರು. ಸುಲಂಜನಾ ರಾಹುಲ್ (53ನೇ), ಮೇನಕಾ ಲೋರೆಂಬಮ್ (61ನೇ ನಿಮಿಷ) ಮತ್ತು ಅರಿನಾ ದೇವಿ (73ನೇ) ಅವರು ಉಳಿದ ಗೋಲುಗಳನ್ನು ಗಳಿಸಿದರು. ಭಾರತ ಭಾನುವಾರ ಬಾಂಗ್ಲಾದೇಶ ವಿರುದ್ಧ ಆಡಲಿದೆ.

ಬಿಎಫ್‌ಸಿಗೆ ಇಂದು ಪಂಜಾಬ್ ಸವಾಲು

ನವದೆಹಲಿ: ಬೆಂಗಳೂರು ಎಫ್‌ಸಿ ತಂಡವು ಶನಿವಾರ ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಇಂಡಿಯನ್ ಸೂಪರ್‌ ಲೀಗ್ ಪಂದ್ಯದಲ್ಲಿ ಆತಿಥೇಯ ಪಂಜಾಬ್‌ ಎಫ್‌ಸಿ ತಂಡವನ್ನು ಎದುರಿಸಲಿದೆ.

ಈ ಹಿಂದೆ ನವೆಂಬರ್‌ ಕೊನೆಯಲ್ಲಿ ಎಸ್‌ಎಲ್‌ನಲ್ಲಿ ಕೊನೆಯ ಸಲ ಎದುರಾದಾಗ, ಪಂಜಾಬ್ ಎಫ್‌ಸಿ 3–3 ಗೋಲುಗಳಿಂದ ಬೆಂಗಳೂರು ತಂಡದ ವಿರುದ್ಧ ಸಮ ಮಾಡಿ ಅಚ್ಚರಿಗೆ ಕಾರಣವಾಗಿತ್ತು. ಪಂಜಾಬ್ ಬಡ್ತಿ ಪಡೆದು ಮೊದಲ ಬಾರಿ ಎಲೈಟ್‌ ಲೀಗ್‌ನಲ್ಲಿ ಆಡುತ್ತಿದೆ. ಬಿಎಫ್‌ಸಿ ಕಳೆದ ಬಾರಿಯ ಐಎಸ್‌ಎಲ್‌ನಲ್ಲಿ ರನ್ನರ್ ಅಪ್ ಸ್ಥಾನ ಕಳೆದಿತ್ತು.

ಫೆ.12ರಿಂದ ಟೆನಿಸ್‌ ಟೂರ್ನಿ

ಬೆಂಗಳೂರು: ಟೆನಿಸ್‌ ಅಡ್ವಾಂಟೇಜ್‌ ಸಂಸ್ಥೆಯು ಸಿಎಫ್‌ಎಸ್ ಟ್ರಸ್ಟ್ ಎಐಟಿಎ ಚಾಂಪಿಯನ್‌ಷಿಪ್ ಸರಣಿಯ 16 ವರ್ಷ ದೊಳಗಿನವರ ಟೆನಿಸ್‌ ಟೂರ್ನಿಯನ್ನು ಇದೇ 12ರಿಂದ 16ರವರೆಗೆ ನಗರದ ಟೆನಿಸ್ ಅಡ್ವಾಂಟೇಜ್ ಪ್ಯಾಲೇಸ್ ಕ್ರೀಡಾಂಗಣದಲ್ಲಿ ಆಯೋಜಿಸಿದೆ.

ಬಾಲಕರ ಮತ್ತು ಬಾಲಕಿಯರ ವಿಭಾಗದ ಮುಖ್ಯಸುತ್ತಿನಲ್ಲಿ ತಲಾ 32 ಸ್ಪರ್ಧಾಳುಗಳು ಇರುವರು. ಎರಡೂ ವಿಭಾಗದಲ್ಲೂ ಮುಖ್ಯಸುತ್ತಿಗೆ ತಲಾ 24 ಮಂದಿ ನೇರ ಪ್ರವೇಶ ಪಡೆದರೆ, ಉಳಿದ 8 ಮಂದಿ ಅರ್ಹತಾ ಸುತ್ತಿನಿಂದ ‌‌ಬರುವರು. ಫೆ.10 ಮತ್ತು 11ರಂದು ಅರ್ಹತಾ ಸುತ್ತಿನ ಪಂದ್ಯಗಳು ನಡೆಯ ಲಿವೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಸ್ಪರ್ಧಾಳುಗಳು ಭಾಗವಹಿ ಸುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT