ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಚಟ್ರಿ ದಂಪತಿಗೆ ಗಂಡು ಮಗು– ಧ್ರುವ ಹೆಸರು

ಭಾರತ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಚಟ್ರಿ ದಂಪತಿಗೆ ಗಂಡು ಮಗು ಜನಿಸಿದೆ.
Published 11 ಸೆಪ್ಟೆಂಬರ್ 2023, 10:54 IST
Last Updated 11 ಸೆಪ್ಟೆಂಬರ್ 2023, 10:54 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಚಟ್ರಿ ದಂಪತಿಗೆ ಗಂಡು ಮಗು ಜನಿಸಿದೆ.

ಈ ಸುದ್ದಿಯನ್ನು ಸುನೀಲ್ ಚಟ್ರಿ ಅವರು ತಮ್ಮ ಅಧಿಕೃತ ಫೇಸ್‌ಬುಕ್ ತಾಣದಲ್ಲಿ ಪ್ರಕಟಿಸಿದ್ದು, ಮಗುವಿಗೆ ಧ್ರುವ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದ್ದಾರೆ.

ಸುನೀಲ್ ಅವರು ಸೋನಮ್ ಭಟ್ಟಾಚಾರ್ಯ ಅವರನ್ನು 2017 ರಲ್ಲಿ ಮದುವೆಯಾಗಿದ್ದಾರೆ.

‘ಆಗಸ್ಟ್ 30 ರಂದು ನಮ್ಮ ಲೋಕಕ್ಕೆ ಹೊಸ ತಾರೆಯ ಆಗಮನವಾಗಿದೆ. ನನ್ನ ಜೀವನದಲ್ಲಿ ನಾನು ಇಲ್ಲಿವರೆಗೆ ಏನು ಸಾಧಿಸಿದ್ದೇನೋ ಅದೆಲ್ಲದ್ದಕ್ಕಿಂತ ಇದೊಂದು ಅದ್ಭುತ ಘಳಿಗೆ. ಕೋಟ್ಯಂತರ ಶುಭಾಶಯಗಳಿಗೆ ನನ್ನ ಮನ ಮೂಕವಿಷ್ಮಿತವಾಗಿದೆ ಎಂದು ಹೇಳಿಕೊಂಡಿದ್ದಾರೆ.

39 ವರ್ಷದ ಸುನೀಲ್ ಚಟ್ರಿ ಅವರು ಭಾರತ ಫುಟ್‌ಬಾಲ್ ತಂಡದ ನಾಯಕತ್ವದ ಜೊತೆ ಇಂಡಿಯನ್ ಸೂಪರ್ ಫುಟ್‌ಬಾಲ್ ಲಿಗ್‌ನಲ್ಲಿ ಬೆಂಗಳೂರು ಎಫ್‌ಸಿ ಅನ್ನು ಪ್ರತಿನಿಧಿಸುತ್ತಿದ್ದಾರೆ.

ಇದನ್ನೂ ಓದಿ

Video: ಪತ್ನಿ ಗರ್ಭಿಣಿಯಾದ ಖುಷಿಯನ್ನು ಸುನಿಲ್ ಚಟ್ರಿ ವ್ಯಕ್ತಪಡಿಸಿದ್ದು ಹೀಗೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT