ವಾಸ್ಕೊ: ಮೊದಲಾರ್ಧದಲ್ಲಿ ದಾಖಲಾದ ತಲಾ ಒಂದೊಂದು ಗೋಲುಗಳ ಬಲದಿಂದ ಎಸ್ಸಿ ಈಸ್ಟ್ ಬೆಂಗಾಲ್ ಮತ್ತು ಕೇರಳ ಬ್ಲಾಸ್ಟರ್ಸ್ ಎಫ್ಸಿ ತಂಡಗಳು ಸಮಬಲ ಸಾಧಿಸಿದವು.

ಭಾನುವಾರ ರಾತ್ರಿ ಇಲ್ಲಿನ ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಪಂದ್ಯ 1–1ರಲ್ಲಿ ಸಮ ಆಯಿತು. 37ನೇ ನಿಮಿಷದಲ್ಲಿ ತೊಮಿಸ್ಲೊವ್ ಮಾರ್ಸೆಲಾ ಗಳಿಸಿದ ಗೋಲಿನ ಬಲದಿಂದ ಈಸ್ಟ್ ಬೆಂಗಾಲ್ ಮುನ್ನಡೆ ಸಾಧಿಸಿತು. ಕೇರಳ 44ನೇ ನಿಮಿಷದಲ್ಲಿ ತಿರುಗೇಟು ನೀಡಿತು.

37ನೇ ನಿಮಿಷದಲ್ಲಿ ರಾಜು ಗಾಯಕವಾಡ್ ಮತ್ತು ತೊಮಿಸ್ಲಾವ್ ಜೋಡಿಯ ಅಮೋಘ ಆಟಕ್ಕೆ ಗೋಲು ಒಲಿಯಿತು. ಎಡಭಾಗದಲ್ಲಿದ್ದ ರಾಜು ದೂರದಿಂದ ತೊಮಿಸ್ಲಾವ್ ಅವರತ್ತ ಚೆಂಡನ್ನು ಅಟ್ಟಿದರು. ತೊಮಿಸ್ಲಾವ್ ಹೆಡ್ ಮಾಡಿ ಚೆಂಡನ್ನು ಗೋಲುಪೆಟ್ಟಿಗೆಯ ಒಳಗೆ ಸೇರಿಸಿದರು.

44ನೇ ನಿಮಿಷದಲ್ಲಿ ಅಲ್ವಾರೊ ವಾಕ್ವೆಜ್ಗೆ ಸುಲಭವಾಗಿ ಚೆಂಡು ಲಭಿಸಿತು. ಎದುರಾಳಿ ತಂಡದ ಆಟಗಾರರ ನಡುವಿನಿಂದ ಅವರು ಗುರಿಯತ್ತ ಒದ್ದರು. ತಡೆಯಲು ಪ್ರಯತ್ನಿಸಿದ ಗೋಲ್ಕೀಪರ್ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಇಂದಿನ ಪಂದ್ಯ
ಹೈದರಾಬಾದ್ ಎಫ್ಸಿ–ನಾರ್ತ್ ಈಸ್ಟ್ ಯುನೈಟೆಡ್
ಸ್ಥಳ: ಬ್ಯಾಂಬೊಲಿಮ್
ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.