ಶನಿವಾರ, ಜನವರಿ 28, 2023
15 °C

ಮೆಸ್ಸಿ, ರೊನಾಲ್ಡೊ ಹಿಂದಿಕ್ಕಿ ₹1,060 ಕೋಟಿ ಗಳಿಸಿದ ಫ್ರಾನ್ಸ್ ಫುಟ್‌ಬಾಲ್‌ ತಾರೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಫ್ರಾನ್ಸ್‌ ಆಟಗಾರ ಕಿಲಿಯಾನ್‌ ಎಂಬಪೆ ಅವರು ವಾರ್ಷಿಕವಾಗಿ ಅತಿಹೆಚ್ಚು ಹಣ ಸಂಪಾದಿಸುವ ಫುಟ್‌ಬಾಲ್‌ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಪ್ಯಾರಿಸ್‌– ಸೇಂಟ್‌ ಜರ್ಮೈನ್‌ (ಪಿಎಸ್‌ಜಿ) ಕ್ಲಬ್‌ಗೆ ಆಡುವ 23 ವರ್ಷದ ಸ್ಟ್ರೈಕರ್‌ ಎಂಬಪೆ ಅವರ ವಾರ್ಷಿಕ ಗಳಿಕೆ ₹ 1,060 ಕೋಟಿಯಷ್ಟಿದೆ ಎಂದು ಫೋಬ್ಸ್‌ ನಿಯತಕಾಲಿಕೆ ವರದಿ ಮಾಡಿದೆ.

ದಿಗ್ಗಜ ಆಟಗಾರರಾದ ಆರ್ಜೆಂಟೀನಾದ ಲಿಯೊನೆಲ್‌ ಮೆಸ್ಸಿ ಮತ್ತು ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಎಂಬಪೆ ಹಿಂದಿಕ್ಕಿದ್ದಾರೆ.

ಎಂಬಪೆ ಅವರು ಮೇ ತಿಂಗಳಲ್ಲಿ ಪಿಎಸ್‌ಜಿ ಕ್ಲಬ್‌ ಜತೆಗಿನ ಒಪ್ಪಂದವನ್ನು ಮೂರು ವರ್ಷಗಳ ಅವಧಿಗೆ ವಿಸ್ತರಿಸಿದ್ದರು. ಈ ಒಪ್ಪಂದದಿಂದಾಗಿ ಅವರು ಶ್ರೀಮಂತ ಆಟಗಾರರಾಗಿ ಹೊರಹೊಮ್ಮಿದ್ದಾರೆ.

ಅವರು ವೇತನ ಮತ್ತು ಬೋನಸ್‌ ರೂಪದಲ್ಲಿ ವಾರ್ಷಿಕ ₹ 911 ಕೋಟಿ ಹಾಗೂ ಜಾಹೀರಾತು ಮೂಲಗಳಿಂದ ₹ 149 ಕೋಟಿ ಗಳಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಎಂಬಪೆ ಜತೆ ಪಿಎಸ್‌ಜಿ ಕ್ಲಬ್‌ಗೆ ಆಡುವ 35 ವರ್ಷದ ಮೆಸ್ಸಿ ₹ 993 ಕೋಟಿ ವಾರ್ಷಿಕ ಗಳಿಕೆಯೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್‌ಗೆ ಆಡುವ 37 ವರ್ಷದ ರೊನಾಲ್ಡೊ ₹ 828 ಕೋಟಿ ಗಳಿಕೆಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು