ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ಯಾಲನ್‌ ಡಿ ಒರ್‌’ ಪಟ್ಟಿ: 2005ರ ಬಳಿಕ ಇದೇ ಮೊದಲ ಬಾರಿಗೆ ಮೆಸ್ಸಿ ಹೊರಗೆ

2005ರ ಬಳಿಕ ಮೊದಲ ಬಾರಿ ನಾಮನಿರ್ದೇಶಕರ ಪಟ್ಟಿಯಲ್ಲಿ ಅರ್ಜೆಂಟೀನಾ ಆಟಗಾರ ಇಲ್ಲ
Last Updated 13 ಆಗಸ್ಟ್ 2022, 11:28 IST
ಅಕ್ಷರ ಗಾತ್ರ

ನಿಯಾನ್‌, ಸ್ವಿಟ್ಜರ್ಲೆಂಡ್‌: ಏಳು ಬಾರಿ ಪ್ರಶಸ್ತಿ ವಿಜೇತ ಲಯೊನೆಲ್ ಮೆಸ್ಸಿ ಅವರು 2005ರ ಬಳಿಕ ಇದೇ ಮೊದಲ ಬಾರಿ ‘ಬ್ಯಾಲನ್‌ ಡಿ ಒರ್‌‘ ನಾಮನಿರ್ದೇಶನಗೊಂಡವರ ಪಟ್ಟಿಯಿಂದ ಹೊರಗುಳಿದಿದ್ದಾರೆ.

ಪ್ರತಿಷ್ಠಿತ ಪ್ರಶಸ್ತಿಗಾಗಿ 30 ಮಂದಿ ಫುಟ್‌ಬಾಲ್‌ ಆಟಗಾರರನ್ನು ಶುಕ್ರವಾರ ನಾಮನಿರ್ದೇಶನ ಮಾಡಲಾಗಿದ್ದು, ಅದರಲ್ಲಿ ಅರ್ಜೆಂಟೀನಾ ಆಟಗಾರನ ಹೆಸರು ಇಲ್ಲ.

ಪೋಲೆಂಡ್‌ನ ರಾಬರ್ಟ್‌ ಲೆವಾಂಡೊಸ್ಕಿ, ಕಳೆದ ವರ್ಷ ಮೆಸ್ಸಿ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದುಕೊಂಡಿದ್ದರು. 2019ರಲ್ಲಿ ಮೆಸ್ಸಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು. 2020ರಲ್ಲಿ ಕೋವಿಡ್‌ ಕಾರಣ ಪ್ರಶಸ್ತಿ ಘೋಷಣೆಯಾಗಿರಲಿಲ್ಲ.

ಈ ಬಾರಿ ಬ್ರೆಜಿಲ್‌ನ ತಾರಾ ಆಟಗಾರ ನೇಮರ್ ಕೂಡ ಪಟ್ಟಿಯಲ್ಲಿಲ್ಲ ಲೆವಾಂಡೊಸ್ಕಿ, ಕಿಲಿನ್ ಬಾಪೆ, ಕರೀಂ ಬೆಂಜೆಮಾ, ಅರ್ಲಿಂಗ್‌ ಹಾಲಂಡ್‌, ಐದು ಬಾರಿ ವಿಜೇತ ಕ್ರಿಸ್ಟಿಯಾನೊ ರೊನಾಲ್ಡೊ, ಮೊಹಮ್ಮದ್ ಸಲಾ, ಸದಿಯೊ ಮಾನೆ, ಕೆವಿನ್ ಡಿ ಬ್ರೂನ್‌, ಹ್ಯಾರಿ ಕೇನ್‌ ನಾಮನಿರ್ದೇಶನಗೊಂಡವರಲ್ಲಿ ಸೇರಿದ್ದಾರೆ.

ಅಕ್ಟೋಬರ್‌ 17ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಬಾರಿ ಯೂರೋಪಿಯನ್ ಟೂರ್ನಿಗಳಲ್ಲಿ ತೋರಿದ ಸಾಮರ್ಥ್ಯವನ್ನು ಆಧರಿಸಿ ಪ್ರಶಸ್ತಿ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT