ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಯೊನೆಲ್‌ ಮೆಸ್ಸಿ ಗೋಲು: ಪಿಎಸ್‌ಜಿಗೆ ದಾಖಲೆ ಪ್ರಶಸ್ತಿ

Published 28 ಮೇ 2023, 21:47 IST
Last Updated 28 ಮೇ 2023, 21:47 IST
ಅಕ್ಷರ ಗಾತ್ರ

ಪ್ಯಾರಿಸ್‌: ತಾರಾ ಆಟಗಾರ ಲಯೊನೆಲ್‌ ಮೆಸ್ಸಿ ಗಳಿಸಿದ ಗೋಲಿನ ನೆರವಿನಿಂದ ಪ್ಯಾರಿಸ್‌ ಸೇಂಟ್ ಜರ್ಮನ್ ತಂಡವು ದಾಖಲೆಯ 11ನೇ ಬಾರಿ ಲೀಗ್‌ 1 ಫ್ರೆಂಚ್‌ ಫುಟ್‌ಬಾಲ್ ಟೂರ್ನಿಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.

ಶನಿವಾರ ಸ್ಟ್ರಾಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ ಪ್ಯಾರಿಸ್‌ ಸೇಂಟ್‌ ಜರ್ಮನ್‌ (ಪಿಎಸ್‌ಜಿ) 1–1 ಗೋಲಿನಿಂದ ಆರ್‌ಸಿ ಸ್ಟ್ರಾಸ್‌ಬರ್ಗ್ ಎದುರು ಡ್ರಾ ಸಾಧಿಸಿತು. ಈ ಮೂಲಕ ಒಂದು ಸುತ್ತು ಬಾಕಿ ಇರುವಂತೆಯೇ ಪಾಯಿಂಟ್ಸ್ ಆಧಾರದಲ್ಲಿ ಪ್ರಶಸ್ತಿ ಗೆದ್ದಿತು. ತಂಡವು 37 ಪಂದ್ಯಗಳಿಂದ 85 ಪಾಯಿಂಟ್ಸ್ ಕಲೆಹಾಕಿತು.

ಸೇಂಟ್‌ ಎಟೀನ್ಸ್ 10 ಬಾರಿ ಪ್ರಶಸ್ತಿ ಗೆದ್ದಿದ್ದು ಇದುವರೆಗಿನ ದಾಖಲೆಯಾಗಿತ್ತು. ಈ ಪಂದ್ಯದಲ್ಲಿ ಮೆಸ್ಸಿ 59ನೇ ನಿಮಿಷದಲ್ಲಿ ‌ಚೆಂಡನ್ನು ಗುರಿ ಸೇರಿಸಿದರು. ಸ್ಟ್ರಾಸ್‌ಬರ್ಗ್ ತಂಡಕ್ಕಾಗಿ ಕೆವಿನ್ ಗಮೆರೊ 79ನೇ ನಿಮಿಷದಲ್ಲಿ ಸಮಬಲದ ಗೋಲು ಹೊಡೆದರು.

ಚೆಂಡಿನೊಂದಿಗೆ ಮುನ್ನುಗ್ಗಿದ ಲಯೊನೆಲ್ ಮೆಸ್ಸಿ (ಬಲ)– ಎಎಫ್‌ಪಿ ಚಿತ್ರ
ಚೆಂಡಿನೊಂದಿಗೆ ಮುನ್ನುಗ್ಗಿದ ಲಯೊನೆಲ್ ಮೆಸ್ಸಿ (ಬಲ)– ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT