ಮಂಗಳವಾರ, ಅಕ್ಟೋಬರ್ 26, 2021
23 °C

ಫುಟ್‌ಬಾಲ್‌: ರಾಜಸ್ಥಾನ್‌ ಎಫ್‌ಸಿ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರೋಚಕ ಹಣಾಹಣಿಯಲ್ಲಿ ರಾಜಸ್ಥಾನ್ ಯುನೈಟೆಡ್ ಎಫ್‌ಸಿ ತಂಡ ಮೇಘಾಲಯದ ರಿಂಥಿ ಎಸ್‌ಸಿಯನ್ನು ಮಣಿಸಿ ಐ–ಲೀಗ್ ಅರ್ಹತಾ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ನಡೆದ ಪಂದ್ಯದಲ್ಲಿ ರಾಜಸ್ಥಾನ್ 3–2ರಲ್ಲಿ ಗೆಲುವು ಸಾಧಿಸಿತು. ಡಿಲ್ಲಿ ರಾಮ್ ಸನ್ಯಾಸಿ (11ನೇ ನಿಮಿಷ), ಸುಖ್‌ಜೀತ್ ಸಿಂಗ್ (45+1ನೇ ನಿ) ಮತ್ತು ಅಮನ್ ಥಾಪಾ (68ನೇ ನಿ) ಅವರು ರಾಜಸ್ಥಾನ್‌ ತಂಡಕ್ಕಾಗಿ ಗೋಲು ಗಳಿಸಿದರು. 79ನೇ ನಿಮಿಷದಲ್ಲಿ ಬಂಪಿಂಕ್‌ರಾವ್ನಮ್ ಮತ್ತು 82ನೇ ನಿಮಿಷದಲ್ಲಿ ಶಿನ್ ಸ್ಟೀವನ್‌ಸನ್ ಅವರು ರಿಂಥಿ ತಂಡಕ್ಕಾಗಿ ಚೆಂಡನ್ನು ಗುರಿ ಮುಟ್ಟಿಸಿದರು. 

ಮಂಗಳವಾರ ಕೆಂಕ್ರೆ ಎಫ್‌ಸಿ ಮತ್ತು ಕೇರಳ ಯುನೈಟೆಡ್ ಎಫ್‌ಸಿ, ಕಾರ್ಬೆಟ್‌ ಎಫ್‌ಸಿ ಮತ್ತು ಎಆರ್‌ಎ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು