ಶನಿವಾರ, ಏಪ್ರಿಲ್ 4, 2020
19 °C
ಪ್ರೇಕ್ಷಕರಿಲ್ಲದೇ ನಡೆಯಲಿರುವ ಪಂದ್ಯ

ಇಂದು ಐಎಸ್‌ಎಲ್‌ ಫೈನಲ್‌: ಯಾರ ಮುಡಿಗೆ ಮೂರನೇ ಕಿರೀಟ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋವಾ: ಒಂದೆಡೆ ಚೆನ್ನೈಯಿನ್‌ ಎಫ್‌ಸಿ, ಮತ್ತೊಂದೆಡೆ ಎಟಿಕೆ ಎಫ್‌ಸಿ. ಈ ತಂಡಗಳ ಪೈಕಿ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಮೂರನೇ ಕಿರೀಟ ಮುಡಿಗೇರಿಸಿಕೊಳ್ಳುವವರು ಯಾರು.

ಹೀಗೊಂದು ಪ್ರಶ್ನೆ ಈಗ ಫುಟ್‌ಬಾಲ್‌ ಪ್ರಿಯರನ್ನು ಕಾಡುತ್ತಿದೆ.

ಉಭಯ ತಂಡಗಳು ಈಗಾಗಲೇ ಲೀಗ್‌ನಲ್ಲಿ ತಲಾ ಎರಡು ಬಾರಿ ಚಾಂಪಿಯನ್‌ ಆಗಿವೆ. ಶನಿವಾರ ಇಲ್ಲಿನ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಪ್ರಶಸ್ತಿ ಗೆದ್ದ ತಂಡ ಹೊಸ ದಾಖಲೆ ಬರೆಯಲಿದೆ. ಲೀಗ್‌ನಲ್ಲಿ ಅತಿ ಹೆಚ್ಚು ಟ್ರೋಫಿ ಜಯಿಸಿದ ಹಿರಿಮೆಗೆ ಆ ತಂಡ ಪಾತ್ರವಾಗಲಿದೆ.

ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಈ ಪಂದ್ಯವನ್ನು ಪ್ರೇಕ್ಷಕರಿಲ್ಲದೆಯೇ ನಡೆಸಲು ತೀರ್ಮಾನಿಸಲಾಗಿದೆ.

ಉಭಯ ತಂಡಗಳು ಸೆಮಿಫೈನಲ್‌ನಲ್ಲಿ ಅಮೋಘ ಆಟ ಆಡಿದ್ದವು. ಚೆನ್ನೈಯಿನ್‌ ತಂಡ ಎಫ್‌ಸಿ ಗೋವಾ ಎದುರೂ, ಎಟಿಕೆ ತಂಡ ಹಾಲಿ ಚಾಂಪಿಯನ್‌ ಬಿಎಫ್‌ಸಿ ವಿರುದ್ಧವೂ ಗೆದ್ದಿದ್ದವು. ಎರಡು ತಂಡಗಳಲ್ಲೂ ಬಲಿಷ್ಠ ಆಟಗಾರರಿರುವುದರಿಂದ ಪ್ರಶಸ್ತಿ ಸುತ್ತಿನಲ್ಲೂ ಜಿದ್ದಾಜಿದ್ದಿನ ಪೈಪೋಟಿ ಕಂಡುಬರುವ ನಿರೀಕ್ಷೆ ಇದೆ.

ಪಂದ್ಯದ ಆರಂಭ: ರಾತ್ರಿ 7.30.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಹಾಟ್‌ ಸ್ಟಾರ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು