ಬೆಂಗಳೂರು: ದಿಟ್ಟ ಆಟವಾಡಿದ ಕರ್ನಾಟಕ ತಂಡದವರು ಸಂತೋಷ್ ಟ್ರೋಫಿ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಒಡಿಶಾದಲ್ಲಿ ಭಾನುವಾರ ನಡೆದ ಎ ಗುಂಪಿನ ಕೊನೆಯ ಪಂದ್ಯದಲ್ಲಿ ಕರ್ನಾಟಕ 2–2ರಿಂದ ಆತಿಥೇಯ ಒಡಿಶಾ ಎದುರು ಡ್ರಾ ಸಾಧಿಸಿತು. ಇದರೊಂದಿಗೆ ಗುಂಪಿನಲ್ಲಿ 9 ಪಾಯಿಂಟ್ಸ್ ಗಳಿಸಿ ಎರಡನೇ ಸ್ಥಾನದೊಂದಿಗೆ ನಾಲ್ಕರ ಘಟ್ಟ ಪ್ರವೇಶಿಸಿತು. ಎ ಗುಂಪಿನಲ್ಲಿ ಅಗ್ರಸ್ಥಾನ (11 ಪಾಯಿಂಟ್ಸ್) ಗಳಿಸಿದ ಪಂಜಾಬ್ ಕೂಡ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.
ಒಡಿಶಾ ಎದುರಿನ ಪಂದ್ಯದಲ್ಲಿ ಕರ್ನಾಟಕದ ಪರ ಎಂ. ಸುನೀಲ್ ಕುಮಾರ್ (17ನೇ ನಿಮಿಷ) ಮತ್ತು ಫ್ರಾಂಕ್ಲಿನ್ ಶಾಜನ್ (50ನೇ ನಿ.) ಗೋಲು ದಾಖಲಿಸಿದರು. ಒಡಿಶಾ ತಂಡಕ್ಕಾಗಿ ಪ್ರವೀಣ್ ಟಿಗ್ಗಾ (21ನೇ ನಿ.) ಮತ್ತು ಚಂದ್ರ ಮುದುಲಿ (35ನೇ ನಿ.) ಚೆಂಡನ್ನು ಗುರಿ ಸೇರಿಸಿದರು.
ಕರ್ನಾಟಕ ತಂಡವು ಸತತ ಐದನೇ ಆವೃತ್ತಿಯಲ್ಲಿ ನಾಲ್ಕರ ಘಟ್ಟ ತಲುಪಿದ ಸಾಧನೆ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.