ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿ: ಒಪ್ಪಂದ ಮುಂದುವರಿಸಿದ ಸುನಿಲ್‌ ಚೆಟ್ರಿ

Published 3 ಜುಲೈ 2023, 22:35 IST
Last Updated 3 ಜುಲೈ 2023, 22:35 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ, ಬಿಎಫ್‌ಸಿ ತಂಡದಲ್ಲಿ ಇನ್ನೊಂದು ವರ್ಷ ಮುಂದುವರಿಯಲಿದ್ದಾರೆ.

‘ನಾನು ಬಿಎಫ್‌ಸಿ ಜತೆಗಿನ ಒಪ್ಪಂದಕ್ಕೆ ಹಲವು ಸಲ ಸಹಿ ಹಾಕಿದ್ದೇನೆ. ಇದೀಗ ಒಪ್ಪಂದವನ್ನು ಇನ್ನೊಂದು ಅವಧಿಗೆ ವಿಸ್ತರಿಸಿದ್ದೇನೆ’ ಎಂದು ಚೆಟ್ರಿ ಹೇಳಿದ್ದಾರೆ.

ಚೆಟ್ರಿ ಅವರು 2013 ರಿಂದಲೂ ಬಿಎಫ್‌ಸಿ ಪರ ಆಡುತ್ತಿದ್ದಾರೆ. 10 ಋತುಗಳಲ್ಲಿ ಅವರು ಹಲವು ಟೂರ್ನಿಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಕ್ಲಬ್‌ ಪರ 250ಕ್ಕೂ ಅಧಿಕ ಪಂದ್ಯಗಳನ್ನು ಆಡಿದ್ದು, 116 ಗೋಲುಗಳನ್ನು ಗಳಿಸಿದ್ದಾರೆ.

ಈ ಅವಧಿಯಲ್ಲಿ ಬಿಎಫ್‌ಸಿ ಏಳು ಪ್ರಶಸ್ತಿಗಳನ್ನು ಜಯಿಸಿದೆ. ಐ–ಲೀಗ್‌ (2014, 2016), ಫೆಡರೇಷನ್‌ ಕಪ್‌ (2015, 2017), ಸೂಪರ್ ಕಪ್‌ (2018), ಐಎಸ್‌ಎಲ್‌ (2019) ಮತ್ತು ಡುರಾಂಡ್‌ ಕಪ್‌ (2022) ಟ್ರೋಫಿಯನ್ನು ಗೆದ್ದುಕೊಂಡಿದೆ.

'ಚೆಟ್ರಿ ಅವರು ಬಿಎಫ್‌ಸಿ ಜತೆಗಿನ ಒಪ್ಪಂದದ ಅವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಿರುವುದು ಕ್ಲಬ್‌ ಪಾಲಿಗೆ ಹೆಮ್ಮೆಯ ಸಂಗತಿ. ಅವರು ನಮ್ಮ ಕ್ಲಬ್‌ನ ಅವಿಭಾಜ್ಯ ಅಂಗವಾಗಿದ್ದಾರೆ’ ಎಂದು ಬಿಎಫ್‌ಸಿ ತಂಡದ ಮಾಲೀಕ ಪಾರ್ಥ್‌ ಜಿಂದಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT