ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Durand Cup: ಮುಂಬೈ ಮಣಿಸಿದ ಬೆಂಗಳೂರು ಎಫ್‌ಸಿಗೆ ಚೊಚ್ಚಲ ಪ್ರಶಸ್ತಿ

Last Updated 18 ಸೆಪ್ಟೆಂಬರ್ 2022, 16:08 IST
ಅಕ್ಷರ ಗಾತ್ರ

ಕೋಲ್ಕತ್ತ: ಡುರಾಂಡ್‌ ಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಕೋಲ್ಕತ್ತದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡವು ಮುಂಬೈ ಸಿಟಿ ಎಫ್‌ಸಿ ವಿರುದ್ಧ 2-1ರ ಅಂತರದ ಭರ್ಜರಿ ಗೆಲುವು ದಾಖಲಿಸಿತು.

ಸುನಿಲ್ ಚೆಟ್ರಿ ಮುಂದಾಳತ್ವದಲ್ಲಿ ಬೆಂಗಳೂರು ಎಫ್‌ಸಿ ತಂಡವು ಟೂರ್ನಿಯುದ್ಧಕ್ಕೂ ಅದ್ಭುತ ಪ್ರದರ್ಶನವನ್ನು ನೀಡಿದೆ. ಅಲ್ಲದೆ 38 ವರ್ಷದ ಚೆಟ್ರಿ, ಡುರಾಂಡ್ ಕಪ್ ಕೊರತೆಯನ್ನು ನೀಗಿಸಿದ್ದಾರೆ.

10ನೇ ನಿಮಿಷದಲ್ಲಿ ಶಿವ ಶಕ್ತಿ ಹಾಗೂ 61ನೇ ನಿಮಿಷದಲ್ಲಿ ಬ್ರೆಜಿಲ್‌ನ ಅಲನ್ ಕೋಸ್ಟಾ ಗೋಲು ಬಾರಿಸುವ ಮೂಲಕ ಬೆಂಗಳೂರು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಶಿವ ಶಕ್ತಿ ಟೂರ್ನಿಯಲ್ಲಿ ಒಟ್ಟು ಐದು ಗೋಲು ದಾಖಲಿಸುವ ಮೂಲಕ ಗಮನ ಸೆಳೆದರು.

1888ರಲ್ಲಿ ಡುರಾಂಡ್ ಕಪ್ ಪ್ರಪ್ರಥಮ ಬಾರಿಗೆ ಶಿಮ್ಲಾದಲ್ಲಿ ಆಯೋಜನೆಯಾಗಿತ್ತು. ಅಲ್ಲದೆ ಅಸ್ತಿತ್ವದಲ್ಲಿರುವ ಏಷ್ಯಾದ ಅತ್ಯಂತ ಹಳೆಯ ಕ್ಲಬ್ ಮತ್ತು ಜಗತ್ತಿನ ಮೂರನೇ ಅತಿ ಹಳೆಯ ಟೂರ್ನಿಯೆನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT