ಬೆಂಗಳೂರು: ಸೌತ್ ಯುನೈಟೆಡ್ ಎಫ್ಸಿ ತಂಡದವರು ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ (ಬಿಡಿಎಫ್ಎ) ಆಶ್ರಯದ ಸೂಪರ್ ಡಿವಿಷನ್ ಫುಟ್ಬಾಲ್ ಲೀಗ್ನ ಪಂದ್ಯದಲ್ಲಿ ಗೆದ್ದಿದ್ದಾರೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಹೋರಾಟದಲ್ಲಿ ಸೌತ್ ಯುನೈಟೆಡ್ 2–1 ಗೋಲುಗಳಿಂದ ಎಎಸ್ಸಿ ಆ್ಯಂಡ್ ಸೆಂಟರ್ ಎಫ್ಸಿ ತಂಡವನ್ನು ಪರಾಭವಗೊಳಿಸಿತು.

ಸೌತ್ ಯುನೈಟೆಡ್ ತಂಡದ ರಿಜ್ವಾನ್ 42ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. 53ನೇ ನಿಮಿಷದಲ್ಲಿ ಆ್ಯರನ್ ಚೆಂಡನ್ನು ಗುರಿ ಮುಟ್ಟಿಸಿದ್ದರಿಂದ ತಂಡ 2–1 ಮುನ್ನಡೆ ಗಳಿಸಿತು.

68ನೇ ನಿಮಿಷದಲ್ಲಿ ಸಮಾನಂದ ಗೋಲು ದಾಖಲಿಸಿದ್ದರಿಂದ ಎಎಸ್ಸಿ ತಂಡ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿಕೊಂಡಿತು. ನಂತರ ರಕ್ಷಣಾ ವಿಭಾಗದಲ್ಲಿ ಎಚ್ಚರಿಕೆಯ ಆಟ ಆಡಿದ ಸೌತ್ ಯುನೈಟೆಡ್ ಸಂಭ್ರಮಿಸಿತು.

ಎಫ್ಸಿ ಡೆಕ್ಕನ್ ಮತ್ತು ಆರ್ಡಬ್ಲ್ಯುಎಫ್ ಎಫ್ಸಿ ನಡುವಣ ‘ಎ’ ಡಿವಿಷನ್ ಲೀಗ್ ಪಂದ್ಯ 2–2 ಗೋಲುಗಳಿಂದ ಡ್ರಾ ಆಯಿತು.

ಎರಡನೇ ನಿಮಿಷದಲ್ಲಿ ನಾಗರಾಜ್, ಎಫ್ಸಿ ಡೆಕ್ಕನ್ ತಂಡದ ಖಾತೆ ತೆರೆದರು. ಮರು ನಿಮಿಷದಲ್ಲಿ ಆರ್ಡಬ್ಲ್ಯುಎಫ್ ತಂಡದ ಅಜಯ್ ಗೋಲು ದಾಖಲಿಸಿ 1–1 ಸಮಬಲಕ್ಕೆ ಕಾರಣರಾದರು. 15ನೇ ನಿಮಿಷದಲ್ಲಿ ಸತೀಶ್ ಕುಮಾರ್ ಗೋಲು ದಾಖಲಿಸಿದ್ದರಿಂದ ಆರ್ಡಬ್ಲ್ಯುಎಫ್ 2–1 ಮುನ್ನಡೆ ಗಳಿಸಿತು. 70+4ನೇ ನಿಮಿಷದಲ್ಲಿ ಸೂರ್ಯ ಚೆಂಡನ್ನು ಗುರಿ ಮುಟ್ಟಿಸಿ ಡೆಕ್ಕನ್ ತಂಡ ಸಮಬಲ ಸಾಧಿಸಲು ನೆರವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.