ಬೆಂಗಳೂರು: ಸುಕ್‌ರಾಜ್ ಸುಬ್ಬ ಮತ್ತು ದಾವಾ ಲೆಂಡಪ್ ಶೆರ್ಪಾ ಅವರ ಆಟದ ಬಲದಿಂದ ಎಫ್‌ಸಿ ಅಗ್ನಿಪುತ್ರ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್ ಪಂದ್ಯದಲ್ಲಿ 2–1 ರಿಂದ ಬಿಯುಎಫ್‌ಸಿ ತಂಡವನ್ನು ಮಣಿಸಿತು.
ಶುಕ್ರವಾರ ನಡೆದ ಪಂದ್ಯದಲ್ಲಿ ಸುಕ್‌ರಾಜ್ (24ನೇ) ಮತ್ತು ದಾವಾ (73ನೇ) ತಲಾ ಒಂದು ಗೋಲು ಗಳಿಸಿದರು. ನೌರೋಬಾಮ್ ಪ್ರೇಮ್‌ಜಿತ್ ಸಿಂಗ್ (90+1ನೇ) ಬಿಯುಎಫ್‌ಸಿ ಪರ ಏಕೈಕ ಗೋಲು ದಾಖಲಿಸಿದರು.
ಮತ್ತೊಂದು ಪಂದ್ಯದಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡವು 3–0ಯಿಂದ ಕೊಡಗು ಎಫ್‌ಸಿ ತಂಡವನ್ನು ಮಣಿಸಿತು. ಯುನೈಟೆಡ್ ತಂಡದ ಪರವಾಗಿ ಜೈಸನ್ ಜೋರ್ಡನ್ ವಾಜ್ (1, 48ನೇ) ಎರಡು ಗೋಲು ಗಳಿಸಿದರೆ, ಚೆಸ್ಟರ್‌ಪೋರ್ಲ್ ಲಿಂಗ್ಡೋ (90+1ನೇ) ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.