ಗುರುವಾರ , ಜೂನ್ 30, 2022
27 °C
ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಟೂರ್ನಿ ಫೈನಲ್ ಪಂದ್ಯ ಇಂದು; ಥಿಯಾಗೊ, ಫ್ಯಾಬಿನೊ ಫಿಟ್‌

ಲಿವರ್‌ಪೂಲ್–ರಿಯಲ್ ಮ್ಯಾಡ್ರಿಡ್ ಮುಖಾಮುಖಿ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಪ್ಯಾರಿಸ್: ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಟೂರ್ನಿಯ ಫೈನಲ್‌ಗೆ ಸಜ್ಜಾಗುತ್ತಿರುವ ಲಿವರ್‌ಪೂಲ್‌ ತಂಡದ ಮಿಡ್‌ಫೀಲ್ಡರ್‌ಗಳಾದ ಥಿಯಾಗೊ ಅಲ್ಕಂತರ ಮತ್ತು ಫ್ಯಾಬಿನ್ಹೊ ಅವರು ಫಿಟ್‌ ಆಗಿದ್ದು ಪಂದ್ಯಕ್ಕೆ ಲಭ್ಯರಿರುವರು.

ಶನಿವಾರ ರಾತ್ರಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಲಿವರ್‌ಪೂಲ್ ತಂಡ ರಿಯಲ್ ಮ್ಯಾಡ್ರಿಡ್ ವಿರುದ್ಧ ಸೆಣಸಲಿದೆ. ಥಿಯಾಗೊ ಮತ್ತು ಫ್ಯಾಬಿನ್ಹೊ ಅವರು ಫಿಟ್ ಆಗಿದ್ದಾರೆ ಎಂದು ರಿಯಲ್ ಮ್ಯಾಡ್ರಿಡ್‌ನ ಮ್ಯಾನೇಜರ್ ಜಾರ್ಜೆನ್ ಕ್ಲಾಪ್‌ ತಿಳಿಸಿದ್ದಾರೆ. 

ಕಳೆದ ಭಾನುವಾರ ನಡೆದ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಥಿಯಾಗೊ ಮೊದಲಾರ್ಧದಲ್ಲೇ ಮಾಂಸಖಂಡದ ಸೆಳೆತಕ್ಕೆ ಒಳಗಾಗಿ ಅಂಗಣ ತೊರೆದಿದ್ದರು. ವೊಲ್ವೆರ್‌ಹ್ಯಾಂಪ್ಡನ್ ವಾಂಡರರ್ಸ್ ಎದುರಿನ ಆ ಪಂದ್ಯದಲ್ಲಿ ಬದಲಿ ಆಟಗಾರ ಕಣಕ್ಕೆ ಇಳಿದಿದ್ದರು.

ಮೇ 10ರಂದು ನಡೆದ ಆ್ಯಶ್ಟನ್ ವಿಲ್ಲಾ ಎದುರಿನ ಪಂಧ್ಯದಲ್ಲಿ ತಂಡ 2–1ರಲ್ಲಿ ಜಯ ಗಳಿಸಿತ್ತು. ಆ ಪಂದ್ಯದಲ್ಲಿ ಗಾಯಾಳುವಾಗಿ ಫ್ಯಾಬಿನ್ಹೊ ಹೊರಹೋಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು